ವಿಷಯಕ್ಕೆ ಹೋಗಿ
ಹುಕ್ಕೇರಿ ಸಮೀಪದ ಬಸ್ ನಿಲ್ದಾಣ ಹತ್ತಿರ ಪ್ರತಿನಿತ್ಯ ವಾಹನಗಳ ಅಡ್ಡಾದಿಡ್ಡಿ ವಾಹನ ನಿಲ್ದಾಣ ಮಾಡಿ ಪ್ರಯಾಣಿಕರಿಗೆ ತೊಂದರೆ ದಿನನಿತ್ಯವಿದೆ ಆದರೆ ಬಸ್ ನಿಲ್ದಾಣದ ಹತ್ತಿರ ಒಬ್ಬ ಪೋಲಿಸ್ ಸಿಬ್ಬಂದಿ ಕೂಡಾ ಇರುವುದಿಲ್ಲ ಹಾಗಾಗಿ ವಾಹನದಟ್ಟನೆ ಹೆಚ್ಚಾಗಿ ಅಂಬ್ಯೂಲೆನ್ನ ಹಾಗೂ ಬಸ್ ಸಂಚಾರ ಬೈಕ ಸಂಚಾರ ಕಾರ್ ಹೀಗೆ ಎಲ್ಲಾ ವಾಹನಗಳಿಗೆ ಟ್ರಾಪಿಕ್ ಕಿರಿಕಿರಿ ದಿನನಿತ್ಯವಾಗಿ ನಡೆಯುತ್ತಿದೆ.ಹುಕ್ಕೇರಿ ಪಟ್ಟಣದಲ್ಲಿ ಹೆಚ್ಚಿದ ಟ್ರಾಫಿಕ್ ಕಿರಿಕಿರಿ ಪಟ್ಟಣದ ಯಾವ ಕಡೆ ಹೋದರು ವಾಹನಗಳ ದಟ್ಟಣೆ ಜನಸಾಮಾನ್ಯರ ಪರದಾಟ ಪಾರ್ಕಿಂಗ್ ಸಮಸ್ಯೆ ದಿನ ನಿತ್ಯ ಎಡಬಿಡದೆ ಕಾಡುತ್ತಿದೆ ಹೆಸರಿಗೆ ಮಾತ್ರ ಪಟ್ಟಣ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಿಸಿದಾಗ ಯಾವ ದೃಷ್ಟಿಕೋನದಿಂದಲೂ ಇದನ್ನು ಪಟ್ಟಣ ಎನ್ನುವಂತಿಲ್ಲ ಎಂಬುದು ಸ್ಥಳೀಯರ ಆರೋಪ ಹುಕ್ಕೇರಿ ಪಟ್ಟಣದ ಹೃದಯ ಭಾಗವಾದ ಬಸ್ ಸ್ಟ್ಯಾಂಡ್,ಬ್ಯಾಂಕ್ ಮುಂದೆ ವಾಹನ ನಿಲುಗಡೆ ಗೆ ಯಾವ ವ್ಯವಸ್ಥೆಯು ಇಲ್ಲ ಎಲಾ ಕಡೆ ಸಾರ್ವಜನಿಕರು ಎರಡು ಬದಿಗಳಲ್ಲಿ ಅಡ್ಡಾದಿಡಿಯಾಗಿ ವಾಹನಗಳನ್ನು ನಿಲ್ಲಿಸಿ ಆಂಬುಲೆನ್ಸ್ ಬರಲಿ ಅಥವಾ ಶಾಲೆಯ ಬಸ್ ಬರಲಿ ಸಂಚಾರಕ್ಕೆ ಅಡಚಣೆ ತೊಂದೋಡುತ್ತಿದ್ದಾರೆ ಕಾಂಪ್ಲೆಕ್ಸ್ ಗಳ ಕೆಲವರ ವಿಕೃತ ಹವ್ಯಾಸ ರಸ್ತೆಯ ಬಹುತೇಕ ಭಾಗ ವಾಹನಗಳ ಆಕ್ರಮಿಸಿಕೊಳ್ಳುತ್ತದೆ ಇದರಿಂದ ಪಾದ ಚಾರಿಗಳು ತುರ್ತು ವಾಹನ ಸವಾರರಿಗೂ ಸಂಕಷ್ಟ ಸಂಚಾರ ನಿಯಮ ಪಾಲಿಸದೆ ಇರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕು ಪೋಲಿಸರು ಇನ್ನಾದರೂ ಕಣ್ಣು ತೆಗೆದು ನೋಡಿ ಪೋಲಿಸರು ಹಾಗೂ ಪುರಸಭೆ ಅಧಿಕಾರಿಗಳು ವಾಣಿಜ್ಯ ಮಳಿಗೆಗೆ ಪರವಾನಿಗೆ ಕೊಡುವಾಗ ಪಾರ್ಕಿಂಗ್ ವಿಷಯದಲ್ಲಿ ಕಟ್ಟು ನಿಟ್ಟಿನ ಕ್ರಮ ಅನುಸರಿಸಬೇಕು ಹುಕ್ಕೇರಿ ಪಟ್ಟಣ ಟ್ರಾಫಿಕ್ ಸಮಸ್ಯೆಯಿಂದ ಸ್ವಲ್ಪವಾದರೂ ಹೊರಗೆ ಬರಬಹುದು. ಸಂಚಾರ ವ್ಯವಸ್ಥೆ ಸಂಪೂರ್ಣ ಬಿಗಡಾಯಿಸಿದೆ ಪುಟ್ಟ ಪಾತ ಗಳನ್ನು ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿ ಮುಗ್ಗಟ್ಟು ಕೊಡಲು ಬಳಸುತ್ತಿದ್ದಾರೆ ಇದನ್ನೆಲ್ಲಾ ಕಂಡು ಪುರಸಭೆಯರು ಕಣ್ಣಿಗೆ ಕಾಣದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಚಾಳಿ ಬೆಳೆಸಿಕೊಂಡ ಸಾರ್ವಜನಿಕರು ಸಂಚಾರ ನಿಯಮವಂತು ಗಾಳಿಗೆ ತೂರಿ ಅಡ್ಡಾದಿಡ್ಡಿ ವಾಹನ ನಿಲ್ಲಿಸದೆ ಇನ್ನಾದರೂ ಸಂಚಾರಿ ನಿಯಮ ಪಾಲಿಸಿ ಒಂದು ವೇಳೆ ಅನುಸರಿಸದವರ ಮೇಲೆ ಸಂಬಂಧ ಪಟ್ಟ ಇಲಾಖೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ವರದಿ :- ಸಂತೋಷ ಪಾಟೀಲ್, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು