ವಿಷಯಕ್ಕೆ ಹೋಗಿ
ಫಯಾಜ್ ಎಂಬಾತನು ನೇಹಾಳನ್ನು ಪ್ರೀತಿಸಲು ಒತ್ತಾಯಿಸಿದ್ದಾನೆ ಮತ್ತು ನೇಹಾ ನಿರಾಕರಿಸಿದ್ದಕ್ಕಾಗಿ ಬಿಬಿಎ ಕಾಲೇಜಿನ ಆಭರಣದಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಆ ದೃಷ್ಟನನ್ನು ಪೊಲೀಸರು ಬಂಧಿಸಿದ್ದಾರೆ, ಹಾಗೂ ಪ್ರದೀಪ್ ಎಂಬಾತ ರುಕ್ಸಾನಾಳನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದ ರುಕ್ಸಾನಾ ಮದುವೆಯಾಗು ನನ್ನನ್ನು ಎಂದು ಒತ್ತಾಯಿಸಿದ್ದಕ್ಕೆ ತುಮಕೂರಿನ ದೊಡ್ಡಗೋಣಿ ಹತ್ತಿರ ಕೊಲೆಮಾಡಿ ಸುಟ್ಟು ಕರ್ಕಲು ಮಾಡಿದ್ದಾನೆ ಹಾಗೂ ಮಗುವನ್ನು ನೆಲಮಂಗಲ ಬಳಿ ಎಸೆದು ಹೋಗಿರುವ ಪ್ರದೀಪ ಇನ್ನೂವರೆಗೆ ಆರೋಪಿಯು ಸಿಕ್ಕಿರುವುದಿಲ್ಲ,ಪೊಲೀಸರು ಆತನನ್ನು ಅರೆಸ್ಟ್ ಮಾಡಿಲ್ಲ ಪ್ರದೀಪನನ್ನು ಬೇಗನೆ ಹುಡುಕಿ ಅರೆಸ್ಟ್ ಮಾಡಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಈ ಎರಡು ಪ್ರಕರಣಗಳಲ್ಲಿ ನೇಹಾ ಮತ್ತು ರುಕ್ಸಾನ ಇವರನ್ನು ಕೊಲೆ ಮಾಡಿದ ಆರೋಪಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಯಾಗಬೇಕೆಂದು ಏಕತಾ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ರಾಯಬಾಗ್ ವತಿಯಿಂದ ಇಂದು ರಾಯಬಾಗ್ ತಾಲೂಕು ದಂಡಾಧಿಕಾರಿಗಳ ಮೂಖ್ಯೇನ ಕರ್ನಾಟಕ ಗೃಹ ಸಚಿವರು ಜಿಲ್ಲಾಧಿಕಾರಿಗಳು ಬೆಳಗಾವಿ ಉಪ ವಿಭಾಗಾಧಿಕಾರಿಗಳು ಚಿಕ್ಕೋಡಿ ಇವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಏಕತಾ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ರಾಯಬಾಗ್ ಇದರ ಹಫೀಸ್ ಡಾ. ಮುಬಾರಕ್ ಸ್ಥಾಪಕರು. ಯುನುಸ್ ಅತ್ತಾರ್ ಅಧ್ಯಕ್ಷರು.ಅಬ್ದುಲ್ ಕನವಾಡೆ ಉಪಾಧ್ಯಕ್ಷರು. ಇರ್ಫಾನ್ ತಾಂಬೋಳಿ ಕಾರ್ಯದರ್ಶಿಗಳು. ಆದಮ್ ಪಠಾಣ್ ಉಪಕಾರ್ಯದರ್ಶಿಗಳು. ಹೈದರ್ ಮುಲ್ಲಾ.ಸಮೀರ್ ಮುಲ್ಲಾ. ಥೌಪಿಕ್ ಮೋಮಿನ. ಸಲ್ಮಾನ್ ಪಠಾಣ್.ಉಬೇದ್ ಮುಲ್ಲಾ ಅನೇಕರಿದ್ದರು. ವರದಿ : ರಮೇಶ್ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು