ವಿಷಯಕ್ಕೆ ಹೋಗಿ
ಕಾಗವಾಡ:-ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ ಇದರಿಂದ ಲೋಕಾಸಭಾ ಚುಣಾವಣೆಯಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು ಅವರು ಕಾಗವಾಡ ಮತಕ್ಷೇತ್ರದ ಗುಂಡೆವಾಡಿ ಮತ್ತು ಮದಭಾವಿ ಗ್ರಾಮದಲ್ಲಿ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೋಲ್ಲೇ ಪ್ರಚಾರ ಸಭೆಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು ದೇಶಕ್ಕೆ ಮೋದಿ ಚಿಕ್ಕೋಡಿ ಜೋಲ್ಲೆಯ ಅವಶ್ಯಕತೆ ತುಂಬಾ ಇದೆ ಆದರಿಂದ ಎಲ್ಲರೂ ಸಹ ಬಿಜೆಪಿಗೆ ಮತ ಹಾಕಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಮತಯಾಚನೆ ನಡೆಸಿದರು.ನಂತರ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಮಾತನಾಡಿ,ನನ್ನ ಅವಧಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಸಮುದಾಯದ ಮತ್ತು ಬಸ ಸ್ಟ್ಯಾಂಡ್ ಸೇರಿದಂತೆ ಹಲವು ಕಾಮಗಾರಿಗಳನ್ನ ತಂದು ಅಭಿವೃದ್ಧಿ ಮಾಡಿದ್ದೇನೆ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮತಯಾಚನೆ ನಡೆಸಿದರು
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು