ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ್ ಗ್ರಾಮದಲ್ಲಿ ಇಂದು ಕೆಲ ಕಿಡಿಗೇಡಿಗಳು ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ರವರ ಭಾವಚಿತ್ರ ವಿರುವ ಬ್ಯಾನರನ್ನು ಉದ್ದೇಶ ಪೂರ್ವಕ ಹರಿದು ಹಾಕಿ ಅವಮಾನಗೊಳಿಸಿದ್ದು .ಇದನ್ನು ವಿರೋದಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಶ್ರೀಮತಿ ಸವಿತಾ ಆಸೋದೆ ಅವರ ನೇತೃತ್ವದಲ್ಲಿ ಶಿರಗಾಂವ್ ಗ್ರಾಮದ ಭೀಮವಾದ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಮತ್ತು ಯುವಕರು ಅಂಬೇಡ್ಕರ್ ನಗರದ ಎಲ್ಲಾ ಭೀಮ ಬಂಧುಗಳು ಒಗ್ಗೂಡಿ ಬಾಬಾಸಾಹೇಬ ಅಂಬೇಡ್ಕರ್ ರವರಿಗೆ ಅವಮಾನ ಗೊಳಿಸಿದಂತ ಮನುವಾದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಂಪೂರ್ಣ ಶಿರಗಾಂವ್ ಬಂದ ಮಾಡುವ ಮೂಲಕ ಪ್ರತಿಭಟಿಸಲಾಯಿತು ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ DYSP ಮತ್ತು ಸಿಪಿಐ ಹಾಗೂ PSI ಸಾಹೇಬರುಗಳು ಬಂದು ಪ್ರತಿಭಟನೆ ಶಾಂತಗೊಳಿಸಲು ಪ್ರಯತ್ನಿಸಿದಾಗ ಪೊಲೀಸ್ ಇಲಾಖೆಗೆ ಜಗ್ಗದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು. ನಂತರ ಪೊಲೀಸ್ ಇಲಾಖೆಯವರು ಮಾನ್ಯ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು (AC) ಅವರನ್ನು ಪ್ರತಿಭಟನೆ ಸ್ಥಳಕ್ಕೆ ಕರೆಯಿಸಿಕೊಂಡು ಅವರ ಮುಖಾಂತರ ಪ್ರತಿಭಟನಾಕಾರರಿಗೆ ಅವಮಾನಗೊಳಿಸಿದಂತ ಕಿಡಿಗೇಡಿಗಳನ್ನು ಎರಡು ದಿನಗಳಲ್ಲಿ ಬಂದಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ವರದಿ :- ರಾಘವೇಂದ್ರ ಸಿಂಪಿ, ಶಿರಗಾಂವ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು