ವಿಷಯಕ್ಕೆ ಹೋಗಿ
ಬರ ಪರಿಸ್ಥಿತಿ ಹಳ್ಳಿಗರ ಗೋಳು ಕೇಳೋರಿಲ್ಲ, ಕೂಲಿಕಾರರಿಗೆ ಖಾತ್ರಿ ಯಾಗದ ಉದ್ಯೋಗ, ವಲಸೆ ಹೋಗುವ ಸಂಭವ,- ನೀತಿ ಸಂಹಿತೆ ಮಾದರಿ. ಒಂದು ಕಡೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮಾದರಿ ಕಂಡು ಬಂದರೆ ಇನ್ನೊಂದು ಕಡೆ ಗ್ರಾಮದ ಚುಕ್ಕಾಣಿ ಹೊಣೆ ಹೊತ್ತಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಗಳಿಗೆ ಹಲವು ಕರ್ತವ್ಯ ಮತ್ತು ಜವಾಬ್ದಾರಿಗಳು ಹೆಗಲಿರಿಕೊಂಡಿವೆ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅಧಿಕಾರ ಇದ್ದು ಇಲ್ಲದಂತಾಗಿದೆ ಪ್ರಸ್ತುತ ಎದುರಾಗಿರುವ ಭೀಕರ ಬರದ ಪರಿಸ್ಥಿತಿಯು ಸೇರಿದಂತೆ ಹಳ್ಳಿಗಳಲ್ಲಿ ಆಡಳಿತದ ನಿರ್ವಹಣೆಗೆ ತೊಂದರೆಯಾಗುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 14 ತಾಲೂಕುಗಳು ಒಟ್ಟು 500 ಗ್ರಾಮ ಪಂಚಾಯಿತಿಗಳು ಇವೆ ಈ ಮೇಲಿನ ಅಂದ್ರೆ 500 ಪಂಚಾಯಿತಿಗಳ ಪೈಕಿ 453 ಕಡೆಗಳಲ್ಲಿ ಪಿಡಿಒ ಕಾರ್ಯ ನಿರ್ವಹಿಸುತ್ತಿದ್ದು ಉಳಿದವುಗಳು ಖಾಲಿ ಸ್ಥಾನಗಳಾಗಿವೆ, 6 ಜನ ಪಿಡಿಒ ಗಳು ಸಚಿವರು ಮತ್ತು ಶಾಸಕರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದಾರೆ. ಕೆಲವು ಪಿಡಿಓ ಗಳು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳಿಗೆ ಬಡ್ತಿ ಹೊಂದಿದ್ದಾರೆ. ಇದರ ನಡುವೆ ಅಂತರ ಜಿಲ್ಲೆಯ ನಿಯೋಜನೆಯ ಮೂಲಕ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಗೊಂಡವರು ಸಹ ಇದ್ದಾರೆ.ಕೆಲವು ಪಂಚಾಯತಿಗಳಲ್ಲಿ ಕಾಯಮ್ಮಾತಿ ಪಿಡಿಒಗಳನ್ನು ಹೊಂದಿದ್ದು ಒಂದು ಖುಷಿಯ ವಿಷಯ ಕೆಲ ಪಂಚಾಯಿತಿಗಳಲ್ಲಿ ಖಾಯಂ ಪಿಡಿಓಗಳ ಕೊರತೆ ಇರುವುದು ಒಂದು ವಿಷಾದನೀಯ ಸಂಗತಿ ಹಾಗೂ ಒಬ್ಬ ಪಿಡಿಒ ಗೆ ಎರಡು ಮೂರು ಗ್ರಾಮ ಪಂಚಾಯಿತಿಗಳ ಆಡಳಿತ ಚಿಕ್ಕಾಣಿಯ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ವಹಿಸಲಾಗಿದೆ ಇವುಗಳ ಮಧ್ಯೆ ಲೋಕಸಭೆಯ ಚುನಾವಣೆಯ ಕಾರ್ಯಗಳಿಗೆ ವಿವಿಧ ವಿಭಾಗಗಳಲ್ಲಿ ಎರಡು ತಿಂಗಳ ಕಾಲ ನಿರಂತರ ಕರ್ತವ್ಯಕ್ಕಾಗಿ ನಿಯೋಜನೆಗೊಳಿಸಿದ್ದು ಗ್ರಾಮ ಪಂಚಾಯಿತಿ ನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರಿ ಅಭಿವೃದ್ಧಿಗೆ ಹೊಡೆತ ಬಿದ್ದಂತಾಗಿದೆ. ಚುನಾವಣೆಯ SST, FST,VST, VVT, ತಂಡಗಳಲ್ಲಿ ಪೀಡಿಒ ಗಳನ್ನ ತೊಡಗಿಸಿಕೊಂಡಿರುವುದರಿಂದ ಹಳ್ಳಿಗಳಲ್ಲಿ ಬರಗಾಲ ಎದುರಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ ಜನ ಧನ ಕರುಗಳಿಗೆ ನೀರು ಪೂರೈಸಲು ತೊಂದರೆಯಾಗುತ್ತಿದೆ ಅದಲ್ಲದೆ ಉದ್ಯೋಗ ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಕಾರ್ಯಕ್ಕೂ ಹಿನ್ನಡೆಯಾಗಿದೆ ದುಡಿಯೋ ಕೈಗಳಿಗೆ ಕೆಲಸ ಇಲ್ಲದಂತಾಗಿದೆ ಇದರಿಂದ ದುಡಿಯುವ ಕೂಲಿಕಾರ್ ವರ್ಗ ವಲಸೆ ಹೋಗುವ ಸಂದರ್ಭ ಬಂದಿದೆ ಮತ್ತು ಮತ ಕಡಿಮೆಯಾಗುವ ಸಾಧ್ಯತೆ ಇದೆ. ಮತದಾನ ಮತ್ತು ಮತ ಎಣಿಕೆಗೆ ಮಾತ್ರ ಪಿಡಿಒಗಳನ್ನು ಬಳಸಬೇಕು ಎನ್ನುವ ಅಭಿಪ್ರಾಯಗಳಿವೆ ಹಾವೇರಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಿಡಿಒಗಳ ನಿಯೋಜನೆಯನ್ನು ಹಿಂತೆಗೆದುಕೊಳ್ಳಲು ಇತರ ಬೇರೆ ಇಲಾಖೆ ಸಿಬ್ಬಂದಿಗೆ ಜಾಗಕ್ಕೆ ಒತ್ತಾಯಗಳು ಕೇಳಿ ಬರುತ್ತಿದೆ .ಈ ಮೂಲಕ ಭೀಕರ ಬರಗಾಲ ಎದುರಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ಜಿಲ್ಲಾ ಆಡಳಿತದ ಮೇಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೆ ಪಿಡಿಓ ಅಗತ್ಯ ಅದಾಗಿಯೂ ಒಬ್ಬ ಪಿಡಿಒ ಗ್ ಎರಡು - ಮೂರು ಕಡೆ ಜವಾಬ್ದಾರಿ ಇದ್ದು ವಾರದಲ್ಲಿ ಒಂದೆರಡು ದಿನ ಮಾತ್ರ ಕಾರ್ಯಾಲಯದಲ್ಲಿ ಲಭ್ಯವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಇದರಿಂದ ಆಡಳಿತದ ವ್ಯವಸ್ಥೆಯನ್ನು ಬಲಗೊಳಿಸಲು ಸಾಧ್ಯವಾಗುತ್ತಿಲ್ಲ. ಇವು ಹಲವು ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಸಮಸ್ಯೆಯಾಗಿವೆ. ಬರಗಾಲದ ಸಮಸ್ಯೆ ಎದುರಾಗಿದೆ ಜಲ ಮೂಲಗಳು ಬತ್ತಿ ಹೋಗಿವೆ ನೀರು ಪೂರೈಕೆಯಲ್ಲಿ ವ್ಯಥೆಯ ಉಂಟಾಗಿದೆ. ಜನರು ಪಿಡಿಒ ಗಳಿಗೆ ಜನರು ವಿಚಾರಿಸಬೇಕೆಂದರೆ ಸಂಪರ್ಕಕ್ಕೆ ಸಿಗುತ್ತಿಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಪಿಡಿಒ ಗಳನ್ನೂ ಹುಡುಕುತ್ತಿದ್ದಾರೆ. ವರದಿ :- ರಮೇಶ ಕಾಂಬಳೆ,
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು