ವಿಷಯಕ್ಕೆ ಹೋಗಿ
ಕರ್ನಾಟಕ ಸರ್ಕಾರದ ಬಡ ಮಹಿಳೆಯರಿಗೆ ಅನುಕೂಲವಾಗುವ ಸಲುವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಭಾಗ್ಯಗಳಲ್ಲಿ ಒಂದಾದ ಶಕ್ತಿ ಭಾಗ್ಯ ಆದರೆ ಬಸ ನಿರ್ವಾಹಕರು ಮಾತ್ರ ಯಾವುದೆ ಸಂಭದವಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಹಾರೂಗೇರಿ ಪಟ್ಟಣದ ಹೊಸದಾಗಿ ಪ್ರಾರಂಭವಾದ ಬಸನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ 3-15ಕ್ಕೆ ಬಸನಿಲ್ದಾಣ ದಿಂದ ಕೆ.ಎ.23,ಎಫ್.1025 ನಂಬರ್ ನ" ಕಲ್ಬುರ್ಗಿ-ನಿಪ್ಪಾಣಿ " ಬಸಿನ ಕಂಡೆಕ್ಟರ್ ಇಲ್ಲಿನ ನಿಲ್ದಾಣದಲ್ಲಿ ಇದ್ದ ಹೆಣ್ಣು ಮಕ್ಕಳು ಜಾಸ್ತಿ ಇರುವ ಕಾರಣ ಯಾರನ್ನು ಹತ್ತಿಸಿಕೊಳ್ಳದೆ, ತುಂಬಾ ಒರಟಾಗಿ ಮಾತನಾಡಿ ಒತ್ತಾಯದಿಂದ ಹತ್ತಿದ ಮಹಿಳೆಯರನ್ನು ಕೆಳಗಿಳಿಸಿ, ಇಬ್ಬರು ಪುರುಷ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರ ಬೆನ್ನ ಹಿಂದೆ ಹತ್ತಿದ್ದ ಮಹಿಳೆಯರನ್ನು ಅಸಹ್ಯ ರೀತಿಯಲ್ಲಿ ವರ್ತಿಸಿ ಅನಾಗರಿಕತೆ ಮೆರೆದಿದ್ದಾನೆ.ರಾಯಬಾಗದ ಕ್ಯಾತ ಬಂಡಾಯ ಸಾಹಿತಿ ಡಾ. ವೈ ಬಿ ಹಿಮ್ಮಡಿ ಸರ್ ಅವರು ಸಹ ಆ ಬಸ್ಸಿನಲ್ಲಿ ಹತ್ತಿದ ಅವರನ್ನು ಸಹ ದೂಡಿ ಸಿಟಿ ಹೊಡೆದು ಬಸ್ ಚಲಾಯಿಸಿಕೊಂಡು ಹೋದರು ಬಸ್ಸಿನಲ್ಲಿ ಸೀಟು ಖಾಲಿ ಇದ್ದುವಲ್ಲದೆ ಸುಡುವ ಬಿಸಿಲಿನ ಬೇಗೆಯಲ್ಲಿ ವಯೋವೃದ್ಧರನ್ನು ಮತ್ತು ಕಂಕುಳಲ್ಲಿ ಮಕ್ಕಳನೆತ್ತಿಕೊಂಡ ತಾಯಂದಿರ ಕಷ್ಟವನ್ನು ನೋಡಿದರು ಆ ವ್ಯಕ್ತಿ ಜನರನ್ನು ಬಸ್ಸಿನಲ್ಲಿ ಹತ್ತಿಸಿಕೊಳ್ಳಲಿಲ್ಲ ಈ ಕಂಡಕ್ಟರ್ ವೃತ್ತಿಗೆ ಲಾಯಕ್ಕಲ್ಲ ಎಂದರು. ಈ ರೀತಿ ಒಬ್ಬ ಕ್ಯಾತ ಬಂಡಾಯ ಸಾಹಿತಿಗಳ ಮುಂದೆ ಮಹಿಳೆಯರನ್ನು ಅವಮಾನಿಸುತ್ತಿರುವ ಇಂತಹ ನಿರ್ವಾಹಕ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ. ರಾಯಬಾಗ ಡಿಪೋ ಮ್ಯಾನೇಜರ್ ಶಶಿ ಹಂಚಿನಾಳ ಅವರಿಗೆ ಕರೆ ಮಾಡಿ ಹಾರೂಗೇರಿಯಲ್ಲಿ ಆಗಿರು ಪ್ರಕರಣದ ಬಗ್ಗೆ ಕೇಳಿದಾಗ ನಿರ್ವಾಹಕ ಸುಳ್ಳು ಹೇಳಿದ್ದಾನೆ ನಾನು ಅವನ ಮೇಲೆ ಶಿಸ್ತು ಕ್ರಮ ಜರುಗಿಸಿ ನೋಟಿಸ್ ಜಾರಿ ಮಾಡುತ್ತೇನೆ ಎಂದು ಹೇಳಿದರು. ವರದಿ: ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು