ವಿಷಯಕ್ಕೆ ಹೋಗಿ
ಸಿ ವೈ ಸಿ ಡಿ ಕಲಾತಂಡದಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಮತದಾನ ಜಾಗೃತಿ ಅಭಿಯಾನವು ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕ, ಜಿಲ್ಲಾ ಆಡಳಿತ ಬೆಳಗಾವಿ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ, ಹಾಗೂ ತಾಲೂಕ ಆಡಳಿತ ತಾಲೂಕ ಸ್ವೀಪ್ ಸಮಿತಿ ಚಿಕ್ಕೋಡಿ ಪುರಸಭೆ ಕಾರ್ಯಾಲಯ ಚಿಕ್ಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಚಿಕ್ಕೋಡಿ ಪುರಸಭೆಯ ಚಿಕ್ಕೋಡಿಯಲ್ಲಿ ಮತದಾನ ಜಾಗೃತಿ ಅಭಿಯಾನವು ನಡೆಯಿತು.ಈ ಸಂದರ್ಭದಲ್ಲಿ ಚಿಕ್ಕೋಡಿಯ ಟಿ ಎಂ ಸಿ ಯ ಮುಖ್ಯಾಧಿಕಾರಿಗಳಾದ ಮಹಾಂತೇಶ ನಿಡೋನಿ ಅವರು ಮಾತನಾಡಿ ಹಿರಿಯ ನಾಗರಿಕರು ವಿಶೇಷ ವಿಕಲಚೇತನರು ಹಾಗೂ ಪ್ರತಿಯೊಬ್ಬ ಮತದಾರರು ಮೇ ಏಳರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ನಿಮ್ಮ ನಿಮ್ಮ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಮತ್ತು ಮತದಾನದ ಶ್ರೇಷ್ಠ ಕಾರ್ಯದಲ್ಲಿ ಪಾಲ್ಗೊಳ್ಳಿ ಯಾವುದೇ ಕರ್ತವ್ಯಗಳಿದ್ದರೂ ಹಾಗೂ ಯಾವುದೇ ಕೆಲಸ ಕಾರ್ಯದ ಒತ್ತಡ ಇದ್ದರೂ ಈ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ, ಅಂಬೇಡ್ಕರ್ ರವರು ನೀಡಿದ ಮತದಾನದ ಹಕ್ಕಿನ ಸಾರ್ಥಕತೆಯನ್ನು ಪಡೆಯಿರಿ ಎಂದರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನ್ ಕಾರ್ಯ ವೈಕರಿ ಚಟುವಟಿಕೆಗನ್ನು ಪ್ರಶಂಸಿಸಿದರೂ. ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷರಾದ ದುಂಡಪ್ಪ ರಂಗಣ್ಣವರ್. ಚಿಕ್ಕೋಡಿ ಟಿ ಎಂ ಸಿ ಯ ಮುಖ್ಯ ಅಧಿಕಾರಿಗಳಾದ ಮಹಾಂತೇಶ್ ನಿಡೋಣಿ. ಸಮುದಾಯ ಸಂಘಟನಾ ಅಧಿಕಾರಿಗಳಾದ ನಾಗೇಂದ್ರ ಹಿರೇಮಠ. ಪರಿಸರ ಅಭಿಯಂತರರು ಪ್ರಿಯಾಂಕ ವಿನಾಯಕ್. ಕಂದಾಯ ನಿರೀಕ್ಷಕರಾದ ಆರ್ ಏ ಸೂಗಿ. ಸಿಡಿಪಿಓ ಭಾರತಿ ಕಾಂಬಳೆ ಅನೇಕರಿದ್ದರು. ವರದಿ : ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು