ವಿಷಯಕ್ಕೆ ಹೋಗಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ರಾಯಬಾಗ್ ಇವರು ರಾಯಬಾಗ ತಾಲೂಕ ದಂಡಾಧಿಕಾರಿಗಳಾದ ಪ್ರಶಾಂತ್ ಚನ್ನಗೊಂಡ ಅವರಿಗೆ ಸಾಲು ಸಾಲು ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ರಾಯಬಾಗ್ ಜಿಲ್ಲಾ ಸಂಚಾಲಕರಾದ ಗುರುನಾಥ ಹೆಗಡೆ ಅವರು ಬರಗಾಲದ ಬರ ಪರಿಹಾರದ ಹಣ ತಕ್ಷಣ ಎಲ್ಲ ರೈತರಿಗೆ ಮುಟ್ಟುವಂತಾಗಬೇಕು. ಮಳೆ ಆಗುವವರೆಗೆ ತಾಲೂಕಿನ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಮುಂದುವರಿಸಬೇಕು. ಅಲಕನೂರು ಗ್ರಾಮದಲ್ಲಿ ಶೀಘ್ರದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಬೇಕು. ತಾಲೂಕಿನ ಬಹುತೇಕ ಭಾಗದಲ್ಲಿ ಸಾರ್ವಜನಿಕ ರಸ್ತೆಗಳ ಅಕ್ಕಪಕ್ಕ ಅಲ್ಲಿರುವ ಕೆಲವು ಜನರು ರಸ್ತೆ ಅತಿಕ್ರಮಣ ಮಾಡಿ ರಸ್ತೆ ಮೇಲೆ ತಿಪ್ಪೆ ಕಟ್ಟಿಗೆ ಬಣವೆ ಹಾಕಿರುವುದರಿಂದ ಅಪಘಾತಗಳಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅವುಗಳನ್ನು ತಕ್ಷಣದಿಂದ ತೆರವುಗೊಳಿಸಬೇಕು. ರಸ್ತೆಗಳ ಮೇಲೆ ಕೆಲವು ಕಡೆ ಅನಧಿಕೃತ ರೋಡ್ ಬ್ರೇಕಗಳನ್ನು ಹಾಕಿರುತ್ತಾರೆ ಅವುಗಳಿಂದ ಸಹ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಅವುಗಳನ್ನು ತೆರೆಗುಳಿಸಬೇಕು ಹಾಗೂ ಶಾಲೆ ಕಾಲೇಜು ದೇವಸ್ಥಾನ ತಿರುವುಗಳಲ್ಲಿ ತಪ್ಪದೇ ರೋಡ್ ಬ್ರೆಕ್ ಗಳನ್ನು ಅವಶ್ಯವಾಗಿ ಹಾಕಿಸಬೇಕು. ರಾಯಬಾಗ್ ತಹಸೀಲ್ದಾರ್ ಕಚೇರಿಯಿಂದ ರಾಯಬಾಗ್ ಹೇಸ್ಕಾಂ ಕಛೇರಿ ನಂದಿಕುರಳಿ ರಸ್ತೆ ತ್ರಿ ಟೆಂಪಲ್ ವರೆಗೆ ರಿಂಗ್ ರೋಡ್ ಭಾಗವಾಗಿ ಹೊಸ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಈಗ ಚಾಲ್ತಿಯಲ್ಲಿರುವ ರಸ್ತೆ ತೀರಾ ಚಿಕ್ಕದಾಗಿದ್ದು ಯಾವಾಗ ಬೇಕಾದರೂ ಅಪಘಾತವಾಗಿ ಜೀವ ಹಾನಿ ಆಗುವ ಸಂಭವ ಹೆಚ್ಚಾಗಿರುತ್ತದೆ ಈಗಲೂ ಸಹ ಈ ರಸ್ತೆಯಲ್ಲಿ ವಾಹನಗಳಿಂದ ಸಾರ್ವಜನಿಕರಿಗೆ ತುಂಬ ತೊಂದರೆ ಆಗುತ್ತಿದೆ ಅದಕ್ಕಾಗಿ ಹೊಸ ರಸ್ತೆ ನಿರ್ಮಾಣ ಮಾಡಿ ಈ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹಾಗೂ ವಿದ್ಯುತ್ ವ್ಯಥೆಯದ ಕುರಿತು ಸಮಸ್ಯೆಗಳನ್ನು ಓದಿ ಹೇಳಲಾಗಿ ಜೆಂಡಾ ಕಟ್ಟೆ ವೃತ್ತದ ಬಳಿ ರಸ್ತೆ ತಡೆಹಿಡಿದು ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗುರುನಾಥ ಹೆಗಡೆ, ಶಿವಾಜಿ ಪಾಟೀಲ್, ಸಂಜು ಮರಿಗಿನಿ, ಪ್ರಕಾಶ್ ಪಾಟೀಲ್, ಸಿದ್ದಪ್ಪ ಗಡ್ಡಿ, ಬೀರಾ ಗಡ್ಡಿ, ಈರಪ್ಪ ಮಾಳಿ. ಸುಮಿತ್ರಾ ಧರ್ಮಟ್ಟಿ, ಶಾಂತವ ಪೂಜಾರಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ಎಲ್ಲ ಪದಾಧಿಕಾರಿಗಳು ಹಾಜರಿದ್ದರು. ವರದಿ:- ರಮೇಶ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು