ವಿಷಯಕ್ಕೆ ಹೋಗಿ
ತಾಲೂಕ ಆಡಳಿತ ರಾಯಬಾಗ್ ದಂಡಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಸುರೇಶ್ ಮುಂಜೆ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ರೈತರ ಅಹವಾಲುಗಳನ್ನು ಸ್ವೀಕರಿಸುವ ರೈತ ಜನಸ್ಪಂದನ ಕಾರ್ಯಕ್ರಮ ನಡೆಯಿತು.1) ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ರಾಯಬಾಗ್.2) ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ರಾಯಭಾಗ.3) ತಾಲೂಕ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ, ರಾಯಬಾಗ್.4) ಶಿಶು ಅಭಿವೃದ್ಧಿ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಯಬಾಗ್.ಹೀಗೆ ತಾಲೂಕಿನ 23 ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳೆಲ್ಲರೂ ಪಾಲ್ಗೊಂಡು ನೆರೆದಿದ್ದ ರೈತರ ಅಹವಾಲಗಳನ್ನು ಸ್ವೀಕರಿಸಿ ತಮ್ಮ ಇಲಾಖೆಯಲ್ಲಿರುವ ಯೋಜನೆಗಳು ಕುರಿತು ವಿವರಿಸಿ ಸ್ವೀಕರಿಸಿದ ಸಮಸ್ಯೆಗಳಿಗೆ ಅನುಗುಣವಾಗಿ ಪರಿಹಾರವನ್ನು ಒದಗಿಸಲು ಎಲ್ಲ ಅಧಿಕಾರಿಗಳು ಕಾಲಾವಕಾಶವನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳ ಸುರೇಶ್ ಮುಂಜೆ ಅವರು ರೈತರ ಒಂದು ಗಂಭೀರ ಪ್ರಶ್ನೆಯಾದ ರೈತರಲ್ಲಿ ಕೆಲವು ರೈತರಿಗೆ ಬರ ಪರಿಹಾರ ಏಕೆ ಜಮೆಯಾಗುತ್ತಿಲ್ಲ ಎಂಬ ಗಂಭೀರ ಪ್ರಶ್ನೆಗೆ ನಾವು ಒಬ್ಬರು ರೈತನ ಮಗನೇ ನಮಗೆ ನಿಮ್ಮ ಸಮಸ್ಯೆ ನನ್ನ ಸಮಸ್ಯೆನೇ ಸರಿ ಬರ ಪರಿಹಾರ ಕೆಲವರಿಗೆ ಏಕೆ ಜಮೆ ಆಗುತ್ತಲ್ಲವೆಂದರೆ ತಾಂತ್ರಿಕ ದೋಷ ಹೊರತು ಇನ್ನಾವುದೇ ಕಾರಣಕ್ಕೆ ಪರಿಹಾರ ನಿಂತಿಲ್ಲ ನಿಮ್ಮ ಬೆಳೆಗೆ ನೀವೇ ಮಾಪಕರು ನೀವೇ ಬೆಳೆ ಕುರಿತು ಗಣಕಯಂತ್ರದಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ಪರಿಹಾರ ಪಡೆಯಬಹುದಾಗಿದೆ ಇದಕ್ಕೆ ಯಾರು ದಲ್ಲಾಳಿಗಳು ಬೇಕಿಲ್ಲ ಎಂದರು ಹಾಗೂ ತಾಲೂಕಿನಲ್ಲಿರುವ ಎಲ್ಲ ಇಲಾಖೆಯಲ್ಲಿರುವ ನಮ್ಮಿಂದಾಗುವ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸೋಣ ಎಂದರು. ವರದಿ :- ರಮೇಶ್ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು