ವಿಷಯಕ್ಕೆ ಹೋಗಿ
ಮಳೆಗಾಲ ಪ್ರಾರಂಭವಾದ ಕಾರಣ ಇತ್ತೀಚೆಗೆ ಆಗಾಗ ಅತಿಯಾದ ಗಾಳಿ ಮಿಂಚು ಸಿಡಿಲುಗಳಿಂದ ಮಳೆ ಸುರಿಯುತ್ತಿದೆ, ಈ ಪ್ರಕೃತಿಯ ವಿಕೋಪದಿಂದಾಗಿ ಓರ್ವ ವೃದ್ಧಿಯು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆಯು ರಾಯಬಾಗ್ ತಾಲೂಕ ವ್ಯಾಪ್ತಿಯಲ್ಲಿ ನಡೆದಿದೆ. ಅದೇ ರೀತಿಯಾಗಿ ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಛಾವಣಿ ಮಳೆಗಾಳಿ ತೂರಿ ಹೋಗಿ ತಿಂಗಳುಗಳೇ ಕಳೆದು ಹೋದರು ಇನ್ನೂ ದುರಸ್ತಿ ಆಗದ ಶಾಲಾ ಕಟ್ಟಡದ ಮೇಲ್ಛಾವಣಿ....ಈ ಅವಾಂತರ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಬಾಗ ಗ್ರಾಮೀಣ ಪ್ರದೇಶದ ರಾಜಾರಾಮ ಕಾಲೋನಿಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಮಳೆಗಾಳಿಗೆ ತೂರಿ ಹೋಗಿ ತಿಂಗಳುಗಳೇ ಕಳೆದರೂ ಅಧಿಕಾರಿಗಳ ಸುಳಿವೆಯೇ ಇಲ್ಲ....ಇನ್ನು ಈ ಶಾಲೆಯಲ್ಲಿ 1ರಿಂದ 5 ನೇಯ ತರಗತಿ ವರೆಗಿನ 100 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ..ಇಂತಹ ಮಳೆಗಾಲದ ಸಮಯದಲ್ಲಿ ಮಕ್ಕಳು ಎಲ್ಲಿ ಕುಳಿತುಕೊಂಡು ವಿದ್ಯಾರ್ಜನೆ ಮಾಡಬೇಕೆಂಬುದು ಜನಸಾಮಾನ್ಯರ ಯಕ್ಷಪ್ರಶ್ನೆಯಾಗಿದೆ .....ಇಷ್ಟೆಲ್ಲ ಆದರೂ ಕೂಡಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಪ್ಪ ಆರ್ ಹಾಗೂ ಉಪನಿರ್ದೇಶಕರಾದ ಹಂಚಾಟೆ ಇವರು ಗಮನ ಹರಿಸದೆ ಇರುವುದು ವಿಷಾದನೀಯ.ವರದಿ ರಮೇಶ್ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು