ವಿಷಯಕ್ಕೆ ಹೋಗಿ
ಕರ್ನಾಟಕ ಪಬ್ಲಿಕ್ ಸ್ಕೂಲ್, ರಾಯಬಾಗ್, ಸರ್ಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ರಾಯಬಾಗ್, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಯಬಾಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿ ಎಸ್ ಮುತ್ತೂರ್ ಸಹಶಿಕ್ಷಕರು ಮಕ್ಕಳನ್ನು ಉದ್ದೇಶಿಸಿ ಯೋಗದ ಪಿತಾಮಹ ಪತಂಜಲಿ ಮಹರ್ಷಿಗಳು, ಯೋಗವೆಂದರೆ ದೇಹವನ್ನು ಬಗ್ಗಿಸುವುದು ಅಥವಾ ತಿರುಗಿಸುವುದು ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ ನಿಜ ಸ್ಥಿತಿ ನೋಡುವ ಮತ್ತು ಅನುಭವಿಸುವ ಸ್ಥಿತಿಗೆ ನಮ್ಮನ್ನು ತರುವ ಒಂದು ತಂತ್ರ. ಯೋಗ ಎಂಬ ಶಬ್ದವು ಸಂಸ್ಕೃತದ ಯುಜ್ ಎಂಬ ಪದದಿಂದ ಬಂದಿದೆ, ಯೂಜ್ ಎಂದರೆ ಜೋಡಿಸು, ಸೇರಿಸು, ಕೂಡಿಸು,ಎಂದರ್ಥ ಮತ್ತು ಯೋಗವೆಂದರೆ ಸಮಾಧಿ, ಉಪಾಯ,ಸಾಧನ, ಎಂಬರ್ಥ, ವಾಸ್ತವಿಕ ದೇಹದೊಂದಿಗೆ ಆಧ್ಯಾತ್ಮಿಕವಾಗಿ ಮನಸ್ಸು,ಆತ್ಮ, ಭಾವನೆಗಳನ್ನು, ಕೂಡಿಸುವ ಸಾಧನೆ ಮಾಡಿಸಲಾಗುತ್ತದೆ ಎಂದರು.ಯಮ, ನಿಯಮ,ಆಸನ, ಪ್ರಾಣಾಯಾಮ,ಪ್ರತ್ಯಹಾರ, ಧಾರನ, ಧ್ಯಾನ,ಸಮಾಧಿ, ಇವು ಯೋಗದ ವಿವಿಧ ಪ್ರಕಾರಗಳು ಎಂದರು.2024 ರ ಅಂತರಾಷ್ಟ್ರೀಯ ಯೋಗ ದಿನದ ಘೋಷ ವ್ಯಾಖ್ಯ "ಮಹಿಳಾ ಸಬಲೀಕರಣಕ್ಕಾಗಿ ಯೋಗ ", ಮಹಿಳೆ ಪ್ರೌಢಾವಸ್ಥೆಯಿಂದ ಋತುಬಂದವರಿಗೆ ಹಾರ್ಮೋನುಗಳು ಹಾಗೂ ದೇಹದಲ್ಲಾಗುವ ಬದಲಾವಣೆಗಳಿಂದ ಹಲವಾರು ದೈಹಿಕ,ಮಾನಸಿಕ,ಒತ್ತಡಕ್ಕೆ ಒಳಗಾಗುತ್ತಾಳೆ ಈ ಒತ್ತಡಗಳಿಗೆ ಯೋಗ ಒಂದೇ ಪರಿಹಾರ ನೀಡಲಿದೆ. ಮೆದುಳಿನ ಕಾರ್ಯವೈಖರಿಯನ್ನು ಸುಧಾರಿಸುತ್ತದೆ. ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆತಂಕವನ್ನು ನಿವಾರಿಸುತ್ತದೆ. ಹೃದಯ ಕಾಯಿಲೆಗಳನ್ನು ದೂರ ಮಾಡುತ್ತದೆ. ಆರೋಗ್ಯಕರ ತೂಕ. ಮೂಳೆಗಳನ್ನು ಬಲಿಷ್ಠ ಗೊಳಿಸುತ್ತದೆ. ಈ ರೀತಿಯಾಗಿ ಸಾಕಷ್ಟು ರೀತಿಯಲ್ಲಿ ಯೋಗದಿಂದ ಉಪಯೋಗಗಳಿವೆ ಎಂದರು. ಮತ್ತು ಕಳೆದ 10 ವರ್ಷಗಳಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಜೂನ್ 21ರಂದು ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರಗು ಬಂದಿದ್ದು ಎಂದು ಮಕ್ಕಳಿಗೆ ತಿಳಿ ಹೇಳಿದರು.ಈ ಸಂದರ್ಭದಲ್ಲಿ ಎಂ ಬಿ ಪಟ್ಟಣ, ಎಂ ಬಿ ಹಡಾಡಿ, ಎಸ್ ಬಿ ಹಾರೋಗೇರಿ, ಆರ್ ಟಿ ಅರ್ಬಳ್ಳಿ, ಎನ್ ವಿ ಮಠದಕರ್, ಎಸ್ಎಸ್ ಪೊಲೀಸ್, ಡಿ ಪಿ ಬಿಡಕರ್. ಎಂ ವಿ ಬ್ಯಾಕೋಡ. ಎಸ್ ಎಂ ಕೋರಬು. ಯು ಎ ಕಾಂಬಳೆ. ಎಲ್ಲ ಶಿಕ್ಷಕ ವೃಂದ ಹಾಜರಿದ್ದರು.ವರದಿ : ರಮೇಶ ಕಾಂಬಳೆ, ರಾಯಬಾಗ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು