ವಿಷಯಕ್ಕೆ ಹೋಗಿ
ಚಿಕ್ಕೋಡಿ : 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಚುನಾವಣೆಗೆ ಎಂದು ಸ್ಪರ್ಧಿಸಿದ ಸ್ವತಂತ್ರ ಪಕ್ಷದ ಅಭ್ಯರ್ಥಿಯಾದ ಮೋಹನ್ ಮೋಟನ್ನವರ್ ಅವರು ವೃತ್ತಿಯಿಂದ ವಕೀಲರು ಹೌದು, ಇವರು ಹಲವು ಬಾರಿ ಲೋಕಸಭಾ ವಿಧಾನಸಭಾ ಚುನಾವಣೆಗಳಿಗೆ ಅನೇಕ ಬಾರಿ ಸ್ಪರ್ಧಿಸಿದ್ದು ಅದರಂತೆ ಈ ಬಾರಿಯೂ ಕೂಡ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿದಿದ್ದರು. ಚುನಾವಣೆ ಮುಗಿದು ದಿನಾಂಕ್ 4 ಜೂನ್ 2024ರಂದು ಮತ ಎಣಿಕೆ ಸಂದರ್ಭದಲ್ಲಿ ಮೋಹನ್ ಮೋಟನ್ನವರ್ ಅವರು ಅಭ್ಯರ್ಥಿಯಾಗಿ ಮತ ಎಣಿಕೆ ಕೇಂದ್ರ ಪ್ರವೇಶ ಮಾಡುವಾಗ ಪೋಲಿಸ್ ಅಧಿಕಾರಿಗಳಾದ ಶ್ರೀ ವಿ. ಎಸ್ ತಳವಾರ್ ಅವರು ಅಭ್ಯರ್ಥಿಯನ್ನು ಪ್ರವೇಶ ದ್ವಾರದಲ್ಲಿ ತಡೆಹಿಡಿದಿದ್ದರು. ಅಭ್ಯರ್ಥಿ ತಕ್ಷಣ ತಮ್ಮ ಗುರುತಿನ ಚೀಟಿ ತೋರಿಸಿದಾಗ ಇದು ನಕಲಿ ಗುರುತಿನ ಚೀಟಿ ಇದೆ ಎಂದು ಅವಮಾನಿಸಿ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ಘಟನೆ ತಡವಾಗಿ ಬೆಳಕೆಗೆ ಬಂದಿದೆ. ಅಲ್ಲದೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಮೋಹನ್ ಮೋಟನ್ನವರ್ ಅವರು ಕೊಟ್ಟ ಹೇಳಿಕೆಯ ಆಧಾರದ ಮೇಲೆ ನಮ್ಮ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೇವೆ. ಅಭ್ಯರ್ಥಿ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ದೂರನ್ನು ಕೂಡ ದಾಖಲಿಸಿದ್ದಾರೆ ಆದರೂ ಕೂಡ ಇನ್ನೂವರೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಕ್ರಮ ಜರುಗಿಸಲು ಮುಂದಾಗಿಲ್ಲಾ , ಅಂದಮೇಲೆ ಪ್ರಜಾಪ್ರಭುತ್ವಕ್ಕೆ ಎಲ್ಲಿದೆ ಬೆಲೆ ಎಂದರ್ಥ. ಏನೇ ಆಗಲಿ ನೊಂದ ಅಭ್ಯರ್ಥಿ ಮೋಹನ್ ಮೋಟನ್ನವರ್ ಅವರಿಗೆ ನ್ಯಾಯ ಸಿಗಲೆಂದು ಮತ್ತು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಾನೂನಿನ ಸುವ್ಯವಸ್ಥೆಯನ್ನು ಕಾಪಾಡಲಿ ಎಂದು ಹಾರೈಸುತ್ತಾ ಮುಂದಿನ ಸುದ್ದಿಯೊಂದಿಗೆ ಮತ್ತೆ ಭೇಟಿಯಾಗೋಣ ಅಲ್ಲಿಯವರೆಗೆ ನೋಡ್ತಾ ಇರಿ ಕೃಷ್ಣಾ ಕಡಲು ಕನ್ನಡ ಪತ್ರಿಕೆ ನಮಸ್ಕಾರ... 🙏🏻
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು