ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿ ಪರಿಸರ ದಿನಾಚರಣೆಯನ್ನು ಅತಿ ಉಸ್ತಾಹದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತರಾದ ತ್ಯಾಗರಾಜ ಕದಂ ಅವರು ಮಾತನಾಡಿ ಭೂಮಿ ಸಮತೋಲನ ಗೋಳಬೇಕಾದರೆ ನಾವೆಲ್ಲರೂ ವಂದೊಂದು ಸಸಿಗಳನ್ನು ನೀಡಬೇಕು ಅವು ದೊಡ್ಡ ಮರವಾಗಿ ಆಮ್ಲಜನಕವನ್ನು ನೀಡುತ್ತವೆ. ಇತ್ತೀಚಿಗೆ 45° 46° ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೆಚ್ಚಾಗಿರುವುದನ್ನು ಕಂಡಿದ್ದೇವೆ ಮತ್ತು ಅದರ ಅನುಭವವನ್ನು ಅನುಭವಿಸಿದ್ದೀವಿ, ಆ ಪಾಪ ಮಾನವನ್ನು ತಡೆಯಲಿಕ್ಕೆ ನಾವು ಸಸಿಗಳನ್ನು ನೆಡಬೇಕು ಮತ್ತು ರಕ್ಷಣೆ ಮಾಡಬೆಕು. ಇಲ್ಲವಾದಲ್ಲಿ ನಾವೆಲ್ಲರೂ ಒಂದು ದಿನ ಆಮ್ಲಜನಕದಿಂದ ಪ್ರಾಣ ತೆತ್ತಬೇಕಾಗುತ್ತದೆ ಅದ ಕಾರಣ ಪ್ರತಿ ಯೊಬ್ಬರು ಸಸಿ, ಗಿಡ ವನ್ನು ಬೆಳೆಸೋದು ನಮ್ಮ ಕರ್ತವ್ಯವಾಗಿದೆ.ಭಾರತೀಯ ಪರಂಪರೆ, ಸಂಪ್ರದಾಯಗಳಲ್ಲಿ ಗಿಡ, ಮರಗಳಿಗೆ, ಕಾಡಿಗೆ ವಿಶೇಷವಾದ ಸ್ಥಾನ ಮಾನ ನೀಡಲಾಗಿದೆ. ಇದರಲ್ಲಿ ಆರೋಗ್ಯ, ವಿಜ್ಞಾನ ಅಡಗಿದೆ. ಎಲ್ಲರ ಜೀವನದಿಂದಲೇ ಗಿಡ, ಮರಗಳ ಬಗ್ಗೆ ಪ್ರೀತಿ ವಿಶ್ವಾಸ ಬೆಳೆಸಿದರೆ ಭವಿಷ್ಯದಲ್ಲಿ ಹಸಿರು ಪರಿಸರ, ಕಾಡು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪರಿಸರವೇ ಜೀವರಾಶಿಗೆ ಆಧಾರ ಇದನ್ನು ಉಳಿಸಲು ಬೇಕು ಜನರ ಸಹಕಾರ. ಕಾಡಿನಿಂದ ಮಳೆ ಮಳೆಯಿಂದ ಬೆಳೆ ಬೆಳೆಯಿಂದ ನಮ್ಮ ಬದುಕು. ಪದ ಪದ ಕೂಡಿ ಹಾಡು, ಹನಿ ಹನಿ ಕೂಡಿ ಹಳ್ಳ, ಮರ ಮರ ಕೂಡಿ ಕಾಡು, ಅರಣ್ಯ. ಈ ಸಂದರ್ಭದಲ್ಲಿ ಸಮೀರ್ ಪವಾರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ರಾಯಬಾಗ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಸಮೀರ್ ಪವಾರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಿ ಎಸ್ ಕಾಂಬಳೆ ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ರಾಯಬಾಗ್, ಶಿವಾನಂದ ಹೊನಮನಿ, ತಾನಾಜಿ ಸಾನೆ, ಪರಶುರಾಮ್ ಟೊನಪೆ, ಲವಪ್ಪ ಕಾಂಬಳೆ, ಅನೇಕರಿದ್ದರು.ವರದಿ :- ರಮೇಶ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು