ವಿಷಯಕ್ಕೆ ಹೋಗಿ
ತಾಲೂಕ ಆಡಳಿತ ರಾಯಬಾಗ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬಾಬು ಜಗಜೀವನ್ ರಾಮ್ ಸಭಾಭವನದಲ್ಲಿ 515ನೇ ಕೆಂಪೇಗೌಡರಜಯಂತ್ಯೋತ್ಸವವನ್ನು ಆಚರಿಸಲಾಯಿತು. ಈ ಒಂದು ಸಂದರ್ಭದಲ್ಲಿ ಈ ಸಮಾರಂಭದ ಅತಿಥಿಗಳಾದ ಹೊಂಬಯ್ಯ ಹೊನ್ನಲಗೆರೆ ಅವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಈ ಸಮಾಜದಲ್ಲಿ ಸಾವಿರಾರು ಜನ ಹುಟ್ಟುತ್ತಾರೆ ಸಾವಿರಾರು ಜನ ಸಾಯುತ್ತಾರೆ. ಹುಟ್ಟು- ಸಾವಿನ ನಡುವೆ ಕೆಲವರು ಮಾತ್ರ ಇತಿಹಾಸದಲ್ಲಿ ಅಜರಾಮರವಾಗುತ್ತಾರೆ. ಇಂತಹ ಮಹಾನ್ ವ್ಯಕ್ತಿಗಳಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಒಬ್ಬರು. ಕೆಂಪೇಗೌಡರು ಕೃಷಿ ಕುಟುಂಬದಿಂದ ಬಂದವರು ಕೆಂಪೇಗೌಡರು ಕೆಂನಂಜೇಗೌಡ ಮತ್ತು ಲಿಂಗಾಂಬೆಯ ತಂದೆ - ತಾಯಿಯ ಉದರದಲ್ಲಿ 1510 ರಲ್ಲಿ ಜೂನ್ 27 ರಂದು ಜನಿಸಿದರು. ನಾಡಪ್ರಭು ಕೆಂನಂಜೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾದ ಯಲಹಂಕ ನಾಡಿನ ಪಾಳ್ಯಗಾರರಾಗಿದ್ದರು. ಕೆಂಪೇಗೌಡರು ವಿಜಯನಗರದ ಅರಸರಾದ ಅಚ್ಚುತರಾಯರಿಂದ 1532 ರಲ್ಲಿ ಬೆಂಗಳೂರು ಮತ್ತು ಕೆಲವು ಪ್ರದೇಶಗಳನ್ನು ಪಡೆದು ತಾಯಿ ಲಿಂಗಾಂಬೆ ಮತ್ತು ಹೆಂಡತಿ ಚೆನ್ನಾಂಬೆಯ ಪ್ರೀತಿಗಾಗಿ ಬೆಂಗಳೂರು ನಿರ್ಮಾಣ ಮಾಡಿದರು. 54 ಪೇಟೆಗಳನ್ನು ಸ್ಥಾಪಿಸಿದರು ಹಾಗೂ ಕೆರೆಗಳು ಉದ್ಯಾನಗಳು ದೇವಾಲಯಗಳು ಹೀಗೆ ಹಲವಾರು ಸಾಧನೆಗಳನ್ನು ಮಾಡಿದರು. ಕೊನೆಗೆ 1569ರಲ್ಲಿ ಕೆಂಪೇಗೌಡರು ನಿಧನರಾದರು ಎಂದು ತಿಳಿ ಹೇಳಿದರು. ಅದೇ ರೀತಿಯಾಗಿ ಈ ಸಮಾರಂಭದ ಗಣ ಅಧ್ಯಕ್ಷತೆಯನ್ನು ವಹಿಸಿದ ರಾಯಬಾಗ್ ತಾಲೂಕ ದಂಡಾಧಿಕಾರಿಗಳಾದ ಸುರೇಶ ಮುಂಜೆ ಅವರು ಕೆಂಪೇಗೌಡರ ಜನ್ಮದಿನದ ಕುರಿತು ದಿನಾಂಕ 26 / 6 / 2024 ರಂದು ಏರ್ಪಡಿಸಿದ ಭಾಷಣ, ಪ್ರಬಂಧ, ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಎಸ ಎಸ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪಾರಿತೋಷಕ ಹಾಗೂ ಸ್ಪರ್ಧಾತ್ಮಕ ಹೊತ್ತಿಗೆಗಳನ್ನು ನೀಡಿ ಸತ್ಕರಿಸಿ, ಕೆಂಪೇಗೌಡರು ಐದು ವರ್ಷದವರು ಇದ್ದಾಗಲೇ ಸರ್ವ ಸಕಲ ವಿದ್ಯೆಗಳನ್ನು ಪಾರಂಗತರಾದವರು, ವಿಜಯದಶಮಿ ಯಂದು ಮಲ್ಲಕಾಳಗದಲ್ಲಿ ತಮ್ಮ ಎದುರಾಳಿಯನ್ನು ಪರಾಭವ ಗೊಳಿಸಿ ಕೃಷ್ಣದೇವರಾಯ ರಿಂದ ಮೆಚ್ಚುಗೆಯನ್ನು ಪಡೆದರು. ಅಂತೆಯೇ ಸಾಧಕರಿಗೆ ಸಾವಿರ ಸಾವಿರ ದಾರಿಗಳು ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ನಾವುಗಳು ಸಮಾಜಕ್ಕೆ ನಮ್ಮಿಂದ ಕೊಡುಗೆಯನ್ನು ನೀಡೋಣ ಎಂದರು. "" ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ"" ಎಂದರು.ಈ ಸಂದರ್ಭದಲ್ಲಿ ಸುರೇಶ್ ಮುಂಜೆ ತಹಸೀಲ್ದಾರರು.ಡಾ ಹೊಂಬಯ್ಯ ಹೊನ್ನಲಗೇರಿ ಪುನ್ಯಾಸಕರು. ಆರ್ ಬಸವರಾಜಪ್ಪ BEO. ಸಂತೋಷ್ ಕಾಂಬಳೆ ಸಿಡಿಪಿಓ.ಎಸ್ ಎಂ ಪಾಟೀಲ್ ಟಿಎಚ್ಒ. ಕಲ್ಪನಾ ಕಾಂಬಳೆ ಸಮಾಜ ಕಲ್ಯಾಣ ಇಲಾಖೆ. ಸಾರಾಪುರೆ ಆರಕ್ಷಕರು. ನಿಂಗಪ್ಪ ಬೀರನಗಡ್ಡಿ. ಲಕ್ಷ್ಮಣ ನಾವಿ. ಅಮೋಘ ನಾಯಿಕ. ಸಚಿನ್ ಸೌಂಧಲಗಿ. ತಾಲೂಕ ಅಧಿಕಾರಿಗಳೆಲ್ಲರೂ ಉಪಸ್ಥಿತರಿದ್ದರು...ವರದಿ :- ರಮೇಶ್ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು