ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.. ಈ ಸಂದರ್ಭದಲ್ಲಿ ಉಪನಿರ್ದೇಶಕರು ಶಿಕ್ಷಣಾಧಿಕಾರಿಗಳು ಎ ಶಿ ಗಂಗಾಧರ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.ಅವರು ಮಾತನಾಡಿ ಈ ಸಮಾಜದಲ್ಲಿ ಸಾವಿರಾರು ಜನ ಹುಟ್ಟುತ್ತಾರೆ ಸಾವಿರಾರು ಜನ ಸಾಯುತ್ತಾರೆ ಹುಟ್ಟು -ಸಾವಿನ ನಡುವೆ ಕೆಲವರು ಮಾತ್ರ ಇತಿಹಾಸದಲ್ಲಿ ಅಜರಾಮರವಾಗುತ್ತಾರೆ. ಇoತಹ ಮಹಾನ ವ್ಯಕ್ತಿಗಳಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಒಬ್ಬರು ಕೆಂಪೇಗೌಡರು ಕೃಷಿ ಕುಟುಂಬದಿಂದ ಬಂದವರು. ಕೆಂನಂಜೇಗೌಡ ಮತ್ತು ಲಿಂಗಾಂಬೆಯ ತಂದೆ -ತಾಯಿಯ ಉದಯನದಲ್ಲಿ 27 ಜೂನ್ 1510 ರಂದು ಜನಿಸಿದರು. ಕೆಂಪೇಗೌಡರು ವಿಜಯನಗರದ ಅರಸರಾದ ಅಚ್ಚುತರಾಯರಿಂದ 1532 ರಲ್ಲಿ ಬೆಂಗಳೂರು ಮತ್ತು ಕೆಲವು ಪ್ರದೇಶಗಳನ್ನು ಪಡೆದು ತಾಯಿ ಲಿಂಗಾಂಬೆ ಮತ್ತು ಹೆಂಡತಿ ಚೆನ್ನಾಂಬೆಯ ಪ್ರೀತಿಗಾಗಿ ಬೆಂಗಳೂರು ನಿರ್ಮಾಣ ಮಾಡಿದರು.54 ಪೇಟೆಗಳನ್ನು ಸ್ಥಾಪಿಸಿದರು. ಹಾಗೂ ಕೆರೆಗಳು, ಉದ್ಯಾನಗಳು, ದೇವಾಲಯಗಳು ಹೀಗೆ ಹಲವಾರು ಸಾಧನೆಗಳನ್ನು ಮಾಡಿದರು.ಕೊನೆಗೆ 1569ರಲ್ಲಿ ಕೆಂಪೇಗೌಡರು ನಿಧನರಾದರು. ಎಂದು ತಿಳಿ ಹೇಳಿದರು.. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಎಚ್ ಎಸ್ ಖಾಡೆ, ಮಮತಾ ಶಿಂದೇ ,ಎಸ್ ಎಸ್ ಹಚಡದ, ಅನಿತಾ ಪಾಟೀಲ್, ಅಧ್ಯಕ್ಷರಾದ, ಎಸ್ ಕೆ ಶೇಕ್, ಎ ಎಂ ಅವಟೇ, ತಿಪ್ಪೀರೆಡ್ಡಿ ಹಾಗೂ ಕಚೇರಿಯ ಎಲ್ಲ ಸಿಬ್ಬಂದಿಗಳು ಹಾಜರಿದ್ದರು...ವರದಿ :- ಎಸ್ ಕಾಂಬಳೆ, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು