ವಿಷಯಕ್ಕೆ ಹೋಗಿ
ರಾಜ್ಯ ಸುದ್ದಿ : ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ /ಅಟಲ್ ಬಿಹಾರಿ ವಾಜಪೇಯಿ / ಡಾ. ಬಿ ಆರ್ ಅಂಬೇಡ್ಕರ್ / ಶ್ರೀಮತಿ ಇಂದಿರಾಗಾಂಧಿ/ ನಾರಾಯಣಗುರು / ಮಾಸ್ತಿ ವೆಂಕಟೇಶ್ ಅಯ್ಯಂಗಾರ್/ ಹಾಗೂ ಇತರೆ ವಸತಿ ಶಾಲೆಗಳ 6 ನೇ ತರಗತಿ ಗಳ ವಿಶಿಷ್ಟ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ನೇರ ಪ್ರವೇಶಕ್ಕೆ 2024 - 25 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.ವಿಶಿಷ್ಟ ಪ್ರವರ್ಗಗಳ ವಿದ್ಯಾರ್ಥಿಗಳು ಎಂದರೆ1) ಸಪಾಯಿ ಕರ್ಮಚಾರಿ ಮಕ್ಕಳು.2) ಚಿಂದಿ ಆಯುವವರ ಮಕ್ಕಳು.3) ಚಿತಾಗಾರದ ಕಾರ್ಮಿಕರ ಮಕ್ಕಳು.4) ಸ್ಮಶಾನ ಕಾರ್ಮಿಕರ ಮಕ್ಕಳು.5) ಮಾನ್ಯುಯಲ್ ಸ್ಕ್ಯಾವೇಂಜರ್ ಗಳ ಮಕ್ಕಳು.6) ಬಾಲಕಾರ್ಮಿಕ ಮಕ್ಕಳು. 7) ಜೀತ ವಿಮುಕ್ತ ಮಕ್ಕಳು.8) ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು.9) ಎಚ್ ಐ ವಿ ಗೆ ತುತ್ತಾದ ಪೋಷಕರ ಮಕ್ಕಳು. ಇವರುಗಳು ವಸತಿ ಶಿಕ್ಷಣ ಸಂಸ್ಥೆಗಳಿಗೆ 2024 -25 ನೇ ಸಾಲಿನ 6ನೇ ತರಗತಿಗೆ ಅರ್ಜಿ ಹಾಕಿ ನೇರ ಪ್ರವೇಶಾತಿಯ ಅವಕಾಶವನ್ನು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು.ಸಂಗ್ರಹ,ವರದಿ : ರಮೇಶ್ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು