ವಿಷಯಕ್ಕೆ ಹೋಗಿ
ಚಿಕ್ಕೋಡಿ : ಕಳೆದ ಮೇ 7ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರಕ್ಕೆ ಜೂನ್ ನಾಲ್ಕರಂದು ಬಿಡುಗಡೆಯಾದ ಫಲಿತಾಂಶದಲ್ಲಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ ಪಡೆದ ಮತಗಳ ಅಂತರದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಪಕ್ಷಕ್ಕೆ ವಿರೋಧವಾಗಿ ಕಾರ್ಯನಿರ್ವಹಿಸಿದ್ದು, ಇದರಿಂದ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಗೆಲವು ಸಾಧಿಸಿದ ಬೆನ್ನಲ್ಲೇ ಸಚಿವ ಸತೀಶ ಜಾರಕಿಹೊಳಿ ಅವರು ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಲೀಡ್ ಕಡಿಮೆಯಾಗಿದೆ ಎಂದು ಕೆಲ ಶಾಸಕರ ವಿರುದ್ಧ ಆರೋಪ ಮಾಡಿದ್ದಾರೆ.ಆರೋಪ ಮಾಡುತ್ತಿದ್ದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ನಾನು ನನ್ನ ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಮೂರು ಸುತ್ತಿನ ಪ್ರಚಾರ ಕೈಗೊಂಡು ಲೀಡ್ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನೀವು 2023ರ ವಿಧಾನಸಭಾ ಚುನಾವಣೆಯಲ್ಲಿ 85,321 ಒಟ್ಟು ಪಡೆದ ಮತಗಳಲ್ಲಿ 25243 ಮತಗಳ ಲೀಡ್ನಿಂದ ಜಯ ಗಳಿಸಿರುವ ಲೀಡ್ ದಷ್ಟು ಈ ಲೋಕಸಭಾ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ ಪ್ರಿಯಾಂಕ ಜಾರಕಿಹೊಳಿ ಅವರಿಗೆ 25243 ಮತಗಳ ಲೀಡ್ ಕೊಡಬೇಕು ಎಂಬ ಸೂಚನೆಯ ಮೇರೆಗೆ ನಾನು ನನ್ನ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಾಮಾಣಿಕ ಪ್ರಯತ್ನದಿಂದ ಕುಡಚಿ ಮತಕ್ಷೇತ್ರದಿಂದ 84,158 ಮತಗಳು ಬೀಳುವಂತಾಗಿದೆ ಮತ್ತು 22588 ಲೀಡ್ ಕೊಟ್ಟಿರುತ್ತೇನೆ ಎಂದರು.ಸಚಿವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದನ್ನು ಹಾಗೂ ಹೈಕಮಾಂಡ್ ಬಳಿ ನನ್ನ ವಿರುದ್ಧ ದೂರು ನೀಡುವುದು ಖಂಡಿಸುತ್ತೇನೆ ಎಂದರು.ನಾನು ನನ್ನ ಮತಕ್ಷೇತ್ರದಲ್ಲಿ ಎಷ್ಟು ಲೀಡ್ ಪಡೆದುಕೊಂಡಿದ್ದೀನಿ ಲೋಕಸಭಾ ಚುನಾವಣೆಯಲ್ಲಿ ಅಷ್ಟು ಲೀಡ್ ನೀಡಿದ್ದೀನಿ ಎಂದು ಹೈಕಮಾಂಡ್ ಬಳಿ ನಾನು ವರದಿ ಬಿಚ್ಚಿ ಇಡುತ್ತೇನೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಪತ್ರಿಕಾಗೋಷ್ಟಿಯಲ್ಲಿ ಸಚಿವರ ಆರೋಪವನ್ನು ತಳ್ಳಿಹಾಕಿದ್ದಾರೆ.ಸಚಿವರು ನನ್ನ ಮೇಲೆ ಮಾಡುತ್ತಿರುವ ಆರೋಪ ಸುಳ್ಳು ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ .ವರದಿ : ರಮೇಶ ಕಾಂಬಳೆ.ಚಿಕ್ಕೋಡಿ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು