ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಿಡಕಲದ ಶಿಕ್ಷಣ ಪ್ರಸಾರಕ ಮಂಡಳದ ವಸಂತರಾವ್ ಪಾಟೀಲ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನ ಕಾರ್ಯಕ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಾರೂಗೇರಿ ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ ಯುವಕರು ದೇಶ ಬೆಳಗುವ ಜ್ಞಾನ ದೀಪಗಳು ದುಶ್ಚಟಗಳಿಗೆ ಬಲಿಯಾಗದೆ. ಆರೋಗ್ಯವೇ ಮಹಾ ಭಾಗ್ಯ ಎನ್ನುವಂತೆ ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಪಡೆದು ದೇಶ ಕಟ್ಟುವ ಉತ್ತಮ ಪ್ರಜೆಗಳಾಗಬೇಕು. ದುಶ್ಚಟಗಳಿಂದ ದೂರವಿದ್ದು ಹೆತ್ತ ತಂದೆ ತಾಯಿಯರಿಗೆ ಕಲಿಸಿದ ಗುರುಗಳಿಗೆ ಕಲಿತ ಶಾಲೆಗೆ ಕೀರ್ತಿ ತರುವಂತವವರಾಗಬೇಕು. ಬೆಂಕಿ ಸತ್ತ ಶವವನ್ನು ಸುಟ್ಟರೆ ದುಶ್ಚಟಗಳು ಜೀವಂತ ಮನುಷ್ಯನನ್ನು ಸುಟ್ಟು ಹಾಕುತ್ತವೆ ಎಂದು ಹಾರೂಗೇರಿಯ ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಅಭಿಮತ ವ್ಯಕ್ತಪಡಿಸಿದರು.ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಾಹಿತಿ ಟಿ ಎಸ್ ಒಂಟಗೂಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಟಾರ್, ಗುಟುಕಾ, ಗಾಂಜಾ ಸಿಗರೇಟ್, ಮುಂತಾದ ಮಾದಕ ದ್ರವ್ಯಗಳನ್ನು ಸೇವಿಸಿದರಿಂದ ಕ್ಯಾನ್ಸರದಂತಹ ಭಯಂಕರ ರೋಗಗಳು ಬರುತ್ತವೆ ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಾಹಿತಿ ಪ್ರಾಚಾರ್ಯ ಟಿ ಎಸ್ ಒಂಟಗೂಡಿ ಅಭಿಮತ ವ್ಯಕ್ತಪಡಿಸಿದರು.ಈ ಒಂದು ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಕುಮಾರ ಎಸ್ ತಳವಾರ ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಪೊಲೀಸ್ ಸಿಬ್ಬಂದಿ ಎಸ್ ಕೆ ಅಸ್ಕಿ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಿನ್ನಪ್ಪ ನಿಲಜಗಿ. ಡಾ. ರತ್ನಾ ಬಾಳಪ್ಪನವರ. ಆರ್ ಟಿ ಮಾಳಿ.ಪ್ರೊಫೆಸರ್ ಪ್ರಭು ಗೋಳಸಂಗಿ.ಶಶಿಕಾಂತ ವಗ್ಗಾ. ಮುತ್ತು ಕರಿಗಾರ. ಕರಣಿಕ ಸಂಜೀವ ಇಮ್ಮಡಿ. ಶಿವಾನಂದ ಪಾರ್ಥನಳ್ಳಿ. ಸುಲೋಚನ ಹುಕ್ಕೇರಿ. ಆನಂದ ಕಳ್ಳಿಗುದ್ದಿ. ಆರ್ ಎಂ ಶಿನಾಳೆ. ಜಿ ಎನ್ ಜಮಖಂಡಿ. ಏ ಎಸ್ ಕಳ್ಳಿಗುದ್ದಿ. ಬಿ ಎಸ್ ಬಿ ಪಾಟೀಲ್. ಡಿ ಬಿ ಬಾನೆ. ಜಿ ಎಸ್ ಬಳ್ಳಾರಿ. ಎಂ ಆರ್ ಕಾಮಕರ. ಎ ಬಿ ಗುಮಟಿ. ಎ ಕೆ ಗುಮಟಿ. ರಾವಸಾಬ ಮಾದರ. ಟಿ ಬಿ ಜಿರಾಳೆ. ದೈಹಿಕ ಶಿಕ್ಷಕರು ಲೋಕೇಶ್ ಪಾಟೀಲ್ ಹಾಗೂ ವಿದ್ಯಾರ್ಥಿಗಳ ವೃಂದ ಉಪಸ್ಥಿತರಿದ್ದರು.ವರದಿ - ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು