ವಿಷಯಕ್ಕೆ ಹೋಗಿ
.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಾಯಭಾಗ ಹಾಗೂ ವಸಂತರಾವ ಪಾಟೀಲ ಪದವಿ ಪೂರ್ವ ಹಾಗೂ ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯ ಹಿಡಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು ಶನಿವಾರ ದಿನಾಂಕ 06 07 2024 ರಂದು ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಕುಮಾರ ತಳವಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಗುಪ್ಪಿಯ ಕೆ ಎಲ್ ಇ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಸಾಹಿತಿ ಏ ಕೆ ಜಯವೀರ ಅವರು ಕನ್ನಡ ನುಡಿ ವೈಭವ ಶೀರ್ಷಿಕೆಯಡಿ ವಿದ್ವತ್ಪೂರ್ಣ ಉಪನ್ಯಾಸ ನೀಡಲಿದ್ದಾರೆ.ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವೀಂದ್ರ ಪಾಟೀಲ ಮುಖ್ಯೋಪಾಧ್ಯಾಯರು ಜಿನ್ನಪ್ಪ ನಿಲಜಿಗಿ. ಗೌರವ ಕಾರ್ಯದರ್ಶಿಗಳಾದ ಕನ್ನಡ ಸಾಹಿತಿ ಟಿ ಎಸ್ ವಂಟಗೂಡಿ. ಶಂಕರ ಕ್ಯಾಸ್ತಿ. ಡಾ. ರತ್ನಾ ಬಾಳಪ್ಪನವರ. ಉಪನ್ಯಾಸಕರಾದ ಆರ್ ಟಿ ಮಾಳಿ ದೈಹಿಕ ಶಿಕ್ಷಕರು ಲೋಕೇಶ ಪಾಟೀಲ. ಕರಾಣಿಕ ಸಂಜೀವ ಇಮ್ಮಡಿ. ಶಿವಾನಂದ ಪಾರ್ಥನಳ್ಳಿ. ಸುಲೋಚನಾ ಹುಕ್ಕೇರಿ. ಪ್ರಭು ಗೋಳಸಂಗಿ ಮುತ್ತು ಕರಿಗಾರ ರಾವಸಾಬ ಮಾದರ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿರುವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಸಾಹಿತಿ ಟಿ ಎಸ್ ಒಂಟಗೂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ರಮೇಶ ಕಾಂಬಳೆ ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು