ವಿಷಯಕ್ಕೆ ಹೋಗಿ
ಚಿಕ್ಕೋಡಿ ಸುದ್ದಿ.: .ನರೇಗಾ ಯೋಜನೆಯ ಉದ್ದೇಶಗಳೇನೆಂದರೆ, ಬೇಡಿಕೆ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೇ ಮಾಡುವುದು. ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವುದು. ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುವುದು. ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವುದು ಇಂತಹ ಇನ್ನೂ ಹತ್ತು ಹಲವು ಉದ್ದೇಶಗಳನ್ನು ಹೊಂದಿರುವ ನರೇಗಾ ಯೋಜನೆಯು. ಇಲ್ಲೊಂದು ಗ್ರಾಮ ಪಂಚಾಯಿತಿಯು ಈ ಎಲ್ಲಾ ಉದ್ದೇಶಗಳನ್ನು ಗಾಳಿಗೆ ತೂರಿ ಅ ಚಾತುರ್ಯ ಕೆಲಸದಲ್ಲಿ ತೊಡಗಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಮೀಪದ ರಾಯಭಾಗ ಗ್ರಾಮೀಣ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಾಯಬಾಗ್ ಖೈರ್ ಕೋಡಿಯಲ್ಲಿ ದಿನಾಂಕ 11/06/2024 ರಂದು ಫೋಟೋ ಮೇಲೆ ಫೋಟೋ ಜಿ ಪಿ ಎಸ್ ಮಾಡಿದ್ದು ಇರುತ್ತದೆ. ದಿನಾಂಕ 08/06/2024 ರಂದು ಸಂತುಭಾಯಿ ದೇವಸ್ಥಾನದ ಹತ್ತಿರ ಕಾಮಗಾರಿ ಮಾಡದೆ ಕೂಲಿ ಕಾರ್ಮಿಕರನ್ನು ನಿಲ್ಲಿಸಿ ಫೋಟೋ ತೆಗೆದು ಅಪ್ಲೋಡ್ ಮಾಡಿ ಹಣ ತೆಗೆದದ್ದು. ಮತ್ತೆ ಸಂತುಭಾಯಿ ದೇವಸ್ಥಾನ ಹತ್ತಿರ ಮತ್ತೊಮ್ಮೆ ದಿನಾಂಕ 11/06/2024 ರಂದು ಮಹಿಳಾ ಕೂಲಿ ಕಾರ್ಮಿಕರನ್ನು ನಿಲ್ಲಿಸಿ ಫೋಟೋ ತೆಗೆದು ಅಪ್ಲೋಡ್ ಮಾಡಿ ಹಣ ತೆಗೆದಿದ್ದಾರೆ. ಅದೇ ರೀತಿ ಖೈರಕೊಡಿಯ ಗುರುಲಿಂಗ ಪೂಜೇರಿ ಅವರ ಮನೆಯ ಮುಂದೆ ಕಾಮಗಾರಿ ಮಾಡದೆ ಕಾಮಗಾರಿ ಆಗಿದೆ ನಡೆದಿದೆ ಎಂದು ದಿನಾಂಕ 26/05/ 2024 ರಂದು ಹಣ ತೆಗೆದದ್ದು ಮತ್ತೆ ದಿನಾಂಕ 11/ 06 /2024 ರಂದು ಆಣೆಬಾಯಿ ಕೋಡಿ ಹತ್ತಿರ ಗಣಪತಿಯ ಹವಾಲ್ದಾರ್ ಮನೆಯ ಮುಂದೆ ಕಾರ್ಮಿಕರು ಸುಮ್ಮನೆ ನಿಂತಿರುವ ಫೋಟೋ ತೆಗೆದು ಅಪ್ಲೋಡ್ ಮಾಡಿ ಹಣ ತೆಗೆದದ್ದು.ಸಮಾಜ ಸೇವಕರಾದ ಹಣಮಂತ ಭಿರಡೆ ಅವರು ರಾಯಬಾಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಹೀಗೆ ಸಾಲು ಸಾಲು ಕಾಮಗಾರಿಗಳ ಹೆಸರಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರದ ಹಣವನ್ನು ಗುಳುಂ ಮಾಡಿದ್ದಾರೆ ಹಾಗೂ ನರೇಗಾ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ ಇವರಿಗೆ ದೂರನ್ನು ನೀಡಿ ಮುಂದಿನ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.ಎಲ್ಲಿದೆ "ಜನರ ಸೇವೆಯೇ ಜನಾರ್ಧನನ ಸೇವೆ ". ವರದಿ : ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು