ವಿಷಯಕ್ಕೆ ಹೋಗಿ
.ರಾಯಬಾಗ್ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಶಿವಶರಣ ಹಡಪದ ಅಪ್ಪಣ್ಣವರ ಜಯಂತ್ಯೋತ್ಸವದ ನಿಮಿತ್ಯ ಪೂರ್ವಭಾವಿ ಸಭೆ ನಡೆಯಿತು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ರವಿವಾರ ದಿ.21 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿರುವ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಎಲ್ಲ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಎಲ್ಲ ಮುಖಂಡರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ತಹಶೀಲ್ದಾರರಾದ ಸುರೇಶ ಮುಂಜೆ ತಿಳಿಸಿದರು.ಶನಿವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಯಂತ್ಯೋತ್ಸವದ ದಿನದಂದು ಎಲ್ಲ ತಾಲೂಕು ಕಚೇರಿಗಳಲ್ಲಿ ಕಡ್ಡಾಯವಾಗಿ ಹಡಪದ ಅಪ್ಪಣ್ಣ ಅವರ ಭಾರತೀಯ ಸಂಪ್ರದಾಯದಂತೆ ಫೋಟೊ ಪೂಜೆ ಕಾರ್ಯಕ್ರಮವನ್ನು ನೆರವೇರಿಸಬೆಕೇಂದು ತಿಳಿಸಿದರು.ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಗೈರಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಸಮಾಜದ ಮುಖಂಡರು ತಹಶೀಲ್ದಾರ ಅವರಿಗೆ ಒತ್ತಾಯಿಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು. ಪಂಚಾಯತ ರಾಜ್ ಇಲಾಖೆ ಎಇಇ ರಾಜೇಶ ಡಂಗ, ವಲಯ ಅರಣ್ಯಾಧಿಕಾರಿ ಸಂತೋಷ ಸುಂಬಳಿ, ಅಬಕಾರಿ ನಿರೀಕ್ಷಕ ಕಿರಣ ಚಂದರಗಿ, ಕಾರ್ಮಿಕ ಇಲಾಖೆಯ ಅಧಿಕಾರಿ ಎಸ್ ಎಲ್ ಗುಗ್ಗರೆ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕ ಅಧ್ಯಕ್ಷ ಕುಮಾರ ಹಡಪದ, ಮಹಾಂತೇಶ ಹಳೀಜೋಳೆ, ಮಣಿಕಂಠ ನಾವಿ, ಹನುಮಂತ ನಾವಿ, ರಮೇಶ ನಾವಿ, ಅಶೋಕ ಹಡಪದ, ವಿಠಲ್ ನಾವಿ, ಸದಾಶಿವ ಹಡಪದ ಸಭೆಯಲ್ಲಿ ಪಾಲ್ಗೊಂಡಿದ್ದರು.ವರದಿ - ರಮೇಶ್ ಕಾಂಬಳೆ ರಾಯಭಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು