ವಿಷಯಕ್ಕೆ ಹೋಗಿ
ಹಾರೂಗೇರಿ ಪಟ್ಟಣದ ಸಮೀಪದ ಇಟ್ನಾಳ, ಸವಸುದ್ದಿ ಹಾಗೂ ವಿವಿಧ ಗ್ರಾಮಗಳಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿದರು.ಇಟ್ನಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 5 ಲಕ್ಷ ರೂಗಳ ಅನುದಾನದಲ್ಲಿ ರಂಗಮಂದಿರ ಹಾಗೂ ಡಾಂಗೆ ಅವರ ತೋಟದ ಪ್ರಾಥಮಿಕ ಶಾಲೆಯ ಕೊಠಡಿ ಉದ್ಘಾಟನೆ ನೆರವೇರಿಸಿದರು. ಸವಸುದ್ದಿ ಗ್ರಾಮದಲ್ಲಿ ಇರುವ ಹೆಸರಾಂತ ಕೆರೆಯನ್ನು ಶಾಸಕರು ವೀಕ್ಷಿಸಿ, ಕೆರೆಗೆ ನೀರು ತುಂಬುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸಾಧಕ ಮತ್ತು ಭಾದಕಗಳನ್ನು ಚರ್ಚಿಸಿ ನಂತರ 2.5 ಲಕ್ಷ ಅನುದಾನದಡಿಯಲ್ಲಿ ಗಟರ್ , 7.5 ಲಕ್ಷ ರೂಗಳ ಅನುದಾನದಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶೌಚಾಲಯ ಹಾಗೂ 5 ಲಕ್ಷ ಅನುದಾನದಲ್ಲಿ ಬಸ್ ತಂಗುದಾನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಮುಗಳಖೋಡ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆ ಹಾರನಕೋಡಿ ಶಾಲೆಯ ಆಟದ ಮೈದಾನಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷದಲ್ಲಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಆಟ ಪಾಠಗಳಲ್ಲಿ ಭಾಗವಹಿಸಬೇಕೆಂದು ಕುಡಚಿ ಶಾಸಕರಾದ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್ ಮಕ್ಕಳಿಗೆ ಉಪದೇಶಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್, ಅಕ್ಷರ ದಾಸೋಹ ಅಧಿಕಾರಿ ಸುಭಾಸ ವಲ್ಯಾಪೂರೆ, ಇಂಜಿನಿಯರ ನಾಯಿಕ, ಕುಡಚಿ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಹಾಲ್ಗುಣಿ, ಕುಡಚಿ ಮತಕ್ಷೇತ್ರದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪರಮಾನಂದ ಬೆಳಗಲಿ ಮುಗಳಖೋಡ ಪುರಸಭೆ ಅಧಿಕಾರಿ ಘಟಕಾಂಬಳೆ, ಮುತ್ತಪ್ಪ ಡಾಂಗೆ, ರಾಜು ಕೌಜಲಗಿ, ವರ್ಧಮಾನ ಶಿರಹಟ್ಟಿ, ಕಲ್ಮೇಶ ಕಾಂಬಳೆ, ಅನಿಲ ಪಾಟೀಲ, ಗುತ್ತಿಗೆದಾರ ದೇವಪ್ಪ ಕೋತ, ಪ್ರಕಾಶ ಬಸ್ತವಾಡೆ, ಶ್ರೀಶೈಲ ಕಡಕೋಳ, ಸಚಿನ ಹಳ್ಕಲ, ಗ್ರಾಮ ಪಂಚಾಯತಿ ಸದಸ್ಯರು, ಊರಿನ ಗಣ್ಯರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ವರದಿ - ರಮೇಶ ಕಾಂಬಳೆ,ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು