ವಿಷಯಕ್ಕೆ ಹೋಗಿ
ರಾಯಬಾಗ : ಪಟ್ಟಣದ ಸಮೀಪದಲ್ಲಿ ಇರುವ ಕೋಳಿಗುಡ್ಡ ಗ್ರಾಮಕ್ಕೆ ಕಾನೂನು ನ್ಯಾಯ ಮಾನವ ಹಕ್ಕುಗಳ ಹಾಗೂ ಸಂಸಧೀಯ ವ್ಯವಹಾರಗಳ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಿರಿಯ ಮಾರ್ಗದರ್ಶಕರು ಎಚ್. ಕೆ. ಪಾಟೀಲ್. ಹಾಗೂ ಕುಡಚಿ ಮತಕ್ಷೇತ್ರದ ಶಾಸಕರಾದ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್ ಇವರು ಹಾಗೂ ಸುಕ್ಷೇತ್ರ ಕೋಳಿಗುಡ್ಡ ಆಡಳಿತ ಮಂಡಳಿ ಇವರಿಂದ ಸನ್ಮಾನ ಸತ್ಕಾರ ಸ್ವೀಕರಿಸಿ ಗ್ರಾಮದಲ್ಲಿನ ಶ್ರೀಕಾಳಿಕೆ ದೇವಿಯ ದರ್ಶನ ಪಡೆದು ತದನಂತರ ಪ್ರವಾಸಿ ಥಾನವಾದ ಕಾಳಿ ಗುಡ್ಡವನ್ನು ವೀಕ್ಷಿಸಿ ಬಹಳ ಚೆನ್ನಾಗಿ ಮಾಡಿದ್ದೀರಿ ಎಂದು ಹರುಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶರಣಗೌಡ ಪಾಟೀಲ,ಪಿ.ಎನ್. ಮುಳ್ಳೂರು, ಅಪ್ಪನಗೌಡ ಪಾಟೀಲ್, ಸೋಮನಗೌಡ ಪಾಟೀಲ್, ನಾಗಪ್ಪ ನರಗಟ್ಟಿ, ಪರಪ್ಪ ಹಲ್ಕಿ, ಗೌಡಪ್ಪಗೌಡ ಪಾಟೀಲ್ಕುಮಾರಗೌಡ ಪಾಟೀಲ್, ಕುಡಚಿ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಹಾಲ್ಗುಣಿ,ಕುಡಚಿ ಮತಕ್ಷೇತ್ರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪರಮಾನಂದ ಬೆಳಗಲಿ, ಶ್ರೀಶೈಲಗೌಡ ಪಾಟೀಲ್ ಬಸವಣ್ಣ ಬಿರಾದಾರ್, ಮತ್ತು ಗ್ರಾಮ ಪಂಚರು,ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.ವರದಿ - ರಮೇಶ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು