ವಿಷಯಕ್ಕೆ ಹೋಗಿ
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರಾಯಬಾಗ ವಸಂತರಾವ ಹಿಡಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ನುಡಿ ವೈಭವ ಸಮಾರಂಭ ನೆರವೇರಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಶಿರಗುಪ್ಪಿ ಕೆ ಎಲ್ ಇ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಸಾಹಿತಿ ಡಾ. ಜಯವೀರ ಏ ಕೆ ಮಾತನಾಡಿ ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸವಿದೆ. ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣು ಇದ್ದಂತೆ ಕೇಳುವುದಕ್ಕೆ ಹಿತ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಅನ್ಯ ಭಾಷೆಗಳನ್ನು ಗೌರವಿಸಿ ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಿ ಪೂಜಿಸಬೇಕು ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನು ಬಿಟ್ಟು ಅಪ್ಪ ಅವ್ವ ಅನ್ನುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಪ್ರತಿಯೊಬ್ಬರೂ ತಾಯಿ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಡಾ. ಜಯವೀರ ಏ ಕೆ ಅಭಿಮತ ವ್ಯಕ್ತಪಡಿಸಿದರು ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವೀಂದ್ರ ಪಾಟೀಲ್ ರವರು ಸಸಿಗೆ ನೀರೆರೇವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಕುಮಾರ ಎಸ್ ತಳವಾರ ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಪ್ರಸ್ತಾವಿಕ ನುಡಿಗಳನ್ನಾಡಿದರು ವೇದಿಕೆಯ ಮೇಲೆ ಉಪನ್ಯಾಸಕರಾದ ಆರ್ ಟಿ ಮಾಳಿ ಡಾ. ರತ್ನಾ ಬಾಳಪ್ಪನವರ ಎಸ್ ವಿ ವಗ್ಗಾ ಸುಲೋಚನಾ ಹುಕ್ಕೇರಿ ದೈಹಿಕ ಶಿಕ್ಷಕ ಲೋಕೇಶ ಪಾಟೀಲ ಪ್ರಭು ಗೋಳಸಂಗಿ ಮುತ್ತು ಕರಿಗಾರ ಕರಣಿಕರಾದ ಸಂಜೀವ ಇಮ್ಮಡಿ ಶಿವಾನಂದ ಪಾರ್ಥನಳ್ಳಿ. ರಾವಸಾಬ ಮಾದರ ಉಪಸ್ಥಿತರಿದ್ದರು.ಸಾಹಿತಿ ಡಾ. ರತ್ನಾ ಬಾಳಪ್ಪನವರ ಸ್ವಾಗತಿಸಿ ನಿರೂಪಿಸಿದರು ಎಸ್ ವಿ ವಗ್ಗಾ ವಂದಿಸಿದರು.ವರದಿ :- ರಮೇಶ್ ಕಾಂಬಳೆ ರಾಯಭಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು