ವಿಷಯಕ್ಕೆ ಹೋಗಿ
ಸಾರ್ವಜನಿಕರನ್ನು ಹಾಗೂ ರೈತರನ್ನು ಚಿಕ್ಕೋಡಿಯ ಪಟ್ಟಣಕ್ಕೆ ಸೇರಿಸುವ ಪ್ರಮುಖ ನಾಲ್ಕು ರಸ್ತೆಗಳಾಗಿರುವ ಹುಕ್ಕೇರಿಯಿಂದ ಚಿಕ್ಕೋಡಿಗೆ ಸೇರಿಸುವ ಮಾರ್ಗ, ಮಿರಜ್ ನಿಂದ ಚಿಕ್ಕೋಡಿಗೆ ಸೇರಿಸುವ ಮಾರ್ಗ, ನಿಪ್ಪಾಣಿಯಿಂದ ಚಿಕ್ಕೋಡಿಗೆ ಸೇರಿಸುವ ಮಾರ್ಗ ಅದೇ ರೀತಿಯಾಗಿ ಕಬ್ಬೂರ್ ಕಡೆಯಿಂದ ಚಿಕ್ಕೋಡಿಗೆ ಸೇರಿಸುವ ಮಾರ್ಗ ಇವು ಪ್ರಮುಖ ನಾಲ್ಕು ರಸ್ತೆಗಳಾಗಿವೆ. ಈ ಪ್ರಮುಖ ರಸ್ತೆಗಳಲ್ಲಿ ಚಿಕ್ಕೋಡಿಯ ಊರಿಗೆ ಹತ್ತಿರದಲ್ಲಿ ರಸ್ತೆಯ ಮೇಲೆ ಚಿಕ್ಕೋಡಿಯ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಬರುವ ವಾಹನಗಳಿಗೆ ಅಡ್ಡ ಹಾಕಿ ನಿಲ್ಲಿಸಿ ತಡೆದು ವಾಹನಗಳ ಆರ್ ಸಿ. ಡಿ ಎಲ್. ಹೆಲ್ಮೆಟ್ ಇನ್ನಿತರ ಕಾಗದ ಪತ್ರಗಳನ್ನು ಕೇಳುವ ನೆಪದಲ್ಲಿ ದಂಡವಿದಿಸುತ್ತಿರುವುದು ಹಾಗೂ ತೊಂದರೆ ಕೊಡುತ್ತಿರುವುದು ಖಂಡನೀಯವಾಗಿದೆ. ಅದರಲ್ಲಿಯೂ ಚಿಕ್ಕೋಡಿಯ ಸುತ್ತಲಿನ ರೈತರು ದಿನಾ ಬೆಳಗಾದರೆ ಒಂದಿಲ್ಲ ಒಂದು ಏನಾದರೂ ಬೇಕೆಂದಾಗ ತರಲಿಕ್ಕೆ ಗಡಿಬಿಡಿಯಿಂದ ಚಿಕ್ಕೋಡಿಗೆ ಹೋದಂತಹ ಸಂದರ್ಭದಲ್ಲಿ ವಾಹನದ ಆರ್ಸಿ ಆಗಲಿ, ಡಿಎಲ್ ಆಗಲಿ, ಮತ್ತು ಹೆಲ್ಮೆಟ್ ಇವುಗಳನ್ನು ವೈಲಿಕೆ ಆಗುತ್ತಾ ,..?ಇಲ್ಲವಲ್ಲಾ ಇಂತಹ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಸಮಯ - ಸಂದರ್ಭವನ್ನು ಅರ್ಥ ಮಾಡಿಕೊಂಡು ದಂಡವಿಧಿಸುವುದನ್ನು ನಿಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗ್ರಹಿಸಿದೆ, ಇನ್ನು ಮುಂದೆ ನಿಲ್ಲಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಚಿಕ್ಕೋಡಿಯ ಡಿವೈಎಸ್ಪಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜ್ಯೋತಿಬಾ ಮಗದುಮ್. ಸತ್ಯಪ್ಪ ದೇವಾನಗೋಳ. ಬಾಪು ಕುತ್ತೆ.ಉದಯ್ ಹವಾಲ್ದಾರ. ಮಾರುತಿ ಅಕ್ಕೋಳೆ. ವಿಶ್ವನಾಥ ಪರಗೌಡ. ಸಿದ್ದಪ್ಪ ಪಾಟೀಲ್ ಇನ್ನಿತರರು ಹಾಜರಿದ್ದರು.ವರದಿ : ರಮೇಶ ಕಾಂಬಳೆ, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು