ವಿಷಯಕ್ಕೆ ಹೋಗಿ
ಕುಡಚಿ : .ಬಹಳ ದಿನಗಳಿಂದ ತಲೆ ನೋವಾಗಿದ್ದ ಬೈಕ್ ಕಳ್ಳರ ಪ್ರಕರಣದ ಪತ್ತೆ ಕಾರ್ಯವನ್ನು ಎಸ್ ಡಿ ಜಲ್ದೆ ಡಿಎಸ್ಪಿ ಅಥಣಿ ಹಾಗೂ ರವಿಚಂದ್ರ ಡಿಬಿ ಸಿಪಿಐ ಹಾರೂಗೇರಿ ಇವರ ಮಾರ್ಗದರ್ಶನದಲ್ಲಿ ಪ್ರೀತಂ ನಾಯಿಕ್ ಪಿಎಸ್ಐ L and O ಕುಡಚಿ. ಎಸ್ ಬಿ ಖೋತ್ ಪಿಎಸ್ಐ ಅ ವಿ ಕುಡಚಿ. ಹಾಗೂ ಕೆ ಆರ್ ಸಾಳೊಂಕ್ಕೆ ಎಎಸ್ಐ. ಎಚ್ ಎಸ್ ಗುಡ್ಡದ. ಸಿದಗೌಡ ಪಾಟೀಲ್ ಸಿಪಿಸಿ. ಆರೀಫ್ ಮುದ್ನಾಳ ಸಿಪಿಸಿ. ಎ ಎಸ್ ಪಾಟೀಲ್ ಸಿಪಿಸಿ. ಪಿ ಎ ಗಡೇಕರ್ ಸಿಪಿಸಿ. ಬಿ ಎಸ್ ಖೋತ ಸಿಪಿಸಿ. ವಿನೋದ್ ಟಕ್ಕನ್ನವರ್ ನೊಳಗೊಂಡ ಕಾರ್ಯಾಚರಣೆಗಿಳಿದ ತಂಡವು ಈ ದಿನ ಕುಡಚಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ : 78/2024 ಕಲಂ 303(1) ಬಿ ಎನ್ ಎಸ್ ಕಾಯ್ದೆ 2023 ರಲ್ಲಿ ಕಳ್ಳತನ ಮಾಡಿದ ಮೋಟಾರ್ ಸೈಕಲ್ ಗಳನ್ನು ಮತ್ತು ಆರೋಪಿತರ ಬಗ್ಗೆ ತಪಾಸಣಾ ಮಾಡುತ್ತಿರುವಾಗ ಕುಡಚಿ ಪಟ್ಟಣದ ಮಾಸಾಹೇಬಿ ದರ್ಗಾ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ಮೋಟಾರ್ ಸೈಕಲ್ ಗಳ ಸಮೇತ ಈ ದಿನ ದಿನಾಂಕ - 22/07/2024 ರಂದು ಬೆಳಿಗ್ಗೆ 6:00 ಗಂಟೆ ಸಮಯಕ್ಕೆ ಸಿಕ್ಕ ಎರಡು ಜನ ಅಂತರ ರಾಜ್ಯ ಮೋಟಾರ್ ಸೈಕಲ್ ಕಳ್ಳರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಕುಡಚಿ ಶೇಡಬಾಳ್ ಹಾಗೂ ಕಾಗವಾಡ ಪಟ್ಟಣಗಳಲ್ಲಿ ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಎಡೆಮುರಿ ಕಟ್ಟಿದ್ದಾರೆ. ಹೆಚ್ಚಿನ ತನಿಖೆಗೆ ಒಳಪಡಿಸಿ ಬಂಧಿತ ಆರೋಪಿಗಳಿಂದ 5, ಲಕ್ಷ 20,000 ಸಾವಿರೂ ಮೌಲ್ಯದ ಬೆಲೆಬಾಳುವ ಎಂಟು ಬೈಕುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ ಎಂದು ಕುಡಚಿ ಪೊಲೀಸ್ ಠಾಣೆಯ ಅಧೀಕ್ಷಕರು ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವರದಿ :- ರಮೇಶ್ ಕಾಂಬಳೆ, ಕುಡಚಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು