ವಿಷಯಕ್ಕೆ ಹೋಗಿ
ವೆಲ್ಲನೆಸ್ಸ ಪೌಷ್ಟಿಕ ಆರೋಗ್ಯ ಆರೈಕೆ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಸಿದ್ಧಾರ್ಥ್ ನಿನ್ನೇಕರ್ ರವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಣಗಿ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ, ಬಡ ಕೂಲಿಕಾರ್ಮಿಕರಿಗೆ ಮತ್ತು ನಾಗರಿಕರಿಗೆ, ಹೊಲಗದ್ದೆಗಳಲ್ಲಿ ಹೋಗಿ ಪೌಷ್ಠಿಕ ಆಹಾರದ ಮಹತ್ವ ಕುರಿತು ಮಾಹಿತಿ ಮತ್ತು ದುಶ್ಚಟಗಳಾದ ತಂಬಾಕು ತಿನ್ನುವುದು, ಅತಿಯಾದ್ ಮದ್ಯ ಸೇವನೆ, ಧೂಮ್ರಪಾನ ಮಾಡುವುದು , ಬಹಳಷ್ಟು ಚಾ ಕುಡಿಯುವುದರಿಂದ ಆಗುತ್ತಿರುವ ಕ್ಯಾಲ್ಸಿಯಂ ಕೊರತೆ, ರಕ್ತಹೀನತೆ, ನರಗಳ ದೌರ್ಬಲ್ಯತೆ, ಪಿತ್ತ, ಕಪ ಕಟ್ಟುವಿಕೆ, ಗ್ಯಾಸ್ಟ್ರಿಕ್ , ಮುಂತಾದ ದುಷ್ಪರಿಣಾಮಗಳು ಆರೋಗ್ಯದ ಮೇಲೆ ಆಗದಂತೆ ನೋಡಿಕೊಳ್ಳಿ ಎಂದು ಸಾಕಷ್ಟು ಪೌಷ್ಠಿಕ ಆಹಾರಗಳನ್ನು ಸೇವಿಸಿ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಮಗ್ರ ಮಾಹಿತಿ ನೀಡಿದರು....!ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ಸಾರ್ವಜನಿಕರ ಸoಪ್ಪರ್ಕ ಅಧಿಕಾರಿ( PRO) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು, (CHO), ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.. ಇಂತಹ ಗ್ರಾಮೀಣ ಮತ್ತು ಬಡ ಜನರಿಗಾಗಿ, ರೈತರಿಗಾಗಿ ಪೌಷ್ಟಿಕ ಆರೋಗ್ಯ ಸೇವೆ ಸಲ್ಲಿಸುತ್ತಿರುವುದು ನಿಜವಾಗಿಯೂ ಇವರ ಸೇವೆ ಶ್ಲ್ಯಾಘನೀಯವಾಗಿದೆ ಎಂದು. ವರದಿ :- ರಮೇಶ್ ಕಾಂಬಳೆ, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು