ವಿಷಯಕ್ಕೆ ಹೋಗಿ
ಕೃಷ್ಣಾ ಕಡಲು ಕನ್ನಡ ಪತ್ರಿಕೆಯ ಇಂಪ್ಯಾಕ್ಟ್. : ದಿನಾಂಕ - 03 / 08/ 2024 ಶನಿವಾರ ರಂದು ಚಿಂಚಣಿ ಗ್ರಾಮದ ಇಂಚಲಕರಂಜಿ ರಸ್ತೆಯ ಹಳ್ಳದ ಸೇತುವೆ ಮತ್ತು ರಸ್ತೆಯನ್ನು ದುರಸ್ತಿ ಮಾಡಿ ಎಂದು ಪ್ರತಿಭಟನೆ.....! ಎಂದು ತಲೆಬರಹದ ಸುದ್ದಿಯು ಕೃಷ್ಣಾ ಕಡಲು ಪತ್ರಿಕೆಯಲ್ಲಿ ಘಟನೆಯ ಕುರಿತು ಪ್ರಕಟಣೆಯಾದ ಹಿನ್ನೆಲೆಯಲ್ಲಿ, ನಿನ್ನೆಯ ದಿನ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳಾದ ಸುಭಾಷ್ ಸಂಪಗಾವಿ ಸಾಹೇಬರು ಸಾರ್ವಜನಿಕರಿಗೆ ಹಾಗೂ ಪ್ರತಿಭಟನಾಕಾರರಿಗೆ ಊರಿನ ಸಮಸ್ತ ಗ್ರಾಮಸ್ಥರಿಗೆ ನೀಡಿದ ಭರವಸೆಯಂತೆ.ಈ ದಿನ ದಿನಾಂಕ - 04/ 08/2024 ರವಿವಾರ ರಂದು ರಸ್ತೆ ಮೇಲೆ ಬಿದ್ದಿರುವ ಆಳವಾದ ಗುಂಡಿಗಳಿಗೆ ಮುರುಮ ಹಾಕಿಸುವ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.ಚಿಕ್ಕೋಡಿಯ ಎ.ಸಿ.ಗಳಾದ ಸುಭಾಷ ಸಂಪಗಾವಿ ಸಾಹೇಬರು, 24 ಗಂಟೆಗಳ ಒಳಗಾಗಿ ಅಂದರೆ ರವಿವಾರ ಮುಂ. 9:00 ಗಂಟೆಗೆ, ರಸ್ತೆಗೆ ಮುರುಮು ಹಾಕಿಸುವ ಕೆಲಸವನ್ನು ಆರಂಭ ಮಾಡಿಸಿ, ಗ್ರಾಮದ ಜನತೆಗೆ ಅನಕೂಲ ಮಾಡಿದ್ದಾರೆ,ನುಡಿದಂತೆ ನಡೆಯುವ, ನೇರ, ದಿಟ್ಟ, ಜನಪರ ಕಾಳಜಿಉಳ್ಳ ಅಧಿಕಾರಿಗಳಾದ ಸುಭಾಷ್ ಸಂಪಗಾವಿ ಸಾಹೇಬರಿಗೆ, ಇಂಜನಿಯರ್ ಗಳಾದ ಬಡಿಗೇರ ಮತ್ತು ಎಂಟೆತ್ತಿನವರ ಇವರಿಗೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮತ್ತು ಹೋರಾಟಗಾರ ಸಂಜು ಬಡಿಗೇರ ಇವರು, ಚಿಂಚಣಿ ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು