ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಿಡಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುರಣ್ಣನವರ ತೋಟ ದ ಚೆನ್ನದಾಸರ ಕಾಲನಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕುಡಿಯಲು ನೀರಿಗಾಗಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಹಾಕಿಸಿಕೊಂಡಿದ್ದು ಸ್ವಂತಕ್ಕೆ ಬಳಕೆಮಾಡಿಕೊಳ್ಳುವುದರೊಂದಿಗೆ ಸಾರ್ವಜನಿಕರಿಗೂ ಅನುಕೂಲ ಮಾಡಿಕೊಟ್ಟಿದ್ದರು ಕೆಲವು ದಿನಗಳ ಹಿಂದೆ ಸಾರ್ವಜನಿಕರಿಗೆ ಸೂರನ್ನವರ್ ಚನ್ನದಾಸರ ಕಾಲನಿಯ ಜನರಿಗೆ ನೀರು ತೆಗೆದುಕೊಳ್ಳಲು ಬಂದವರಿಗೆ ನೀವು ನೀರು ತೆಗೆದುಕೊಳ್ಳಬೇಡಿ ಮತ್ತು ನೀರು ಬಳಕೆ ಮಾಡಬೇಡಿ ತಡೆದಿರುವಂತಹ ಘಟನೆಯೊಂದು ಹಿಡಕಲ್ ಗ್ರಾಮ ಪಂಚಾಯಿತಿಯ ವಾರ್ಡ್ ನಂಬರ್ 5 ಮತ್ತು 6 ರ ಸದಸ್ಯರಿಂದ ನಡೆದದ ಘಟನೆಯಾಗಿದೆ.ತದನಂತರ ವಾರ್ಡ್ ನಂಬರ್ 5 ಮತ್ತು 6 ರಲ್ಲಿ ವಾಸಿಸುವ ಸ್ಥಳೀಯರೆಲ್ಲರೂ ಕೂಡಿಕೊಂಡು ಗ್ರಾಮ ಪಂಚಾಯಿತಿಗೆ ಬಂದು ಮನವಿಯ ಮುಖಾಂತರ ಸದಸ್ಯರಿಂದ ತಮಗಾದ ಅನ್ಯಾಯ, ಸಮಸ್ಯೆಗಳನ್ನು ಅಭಿವೃದ್ದಿ ಅಧಿಕಾರಿಗಳ ಮುಂದೆ ನೀರು, ಬೆಳಕು, ಶೌಚಾಲಯಗಳು ಇವುಗಳು ನಮ್ಮ ಪಾಲಿಗೆ ಮರೀಚಿಕೆಯಾಗಿವೆ ಇನ್ನು ಹತ್ತು ಹಲವು ಸಮಸ್ಯೆಗಳನ್ನು ತೋಡಿಕೊಂಡರು.ಇದನ್ನ ಅರಿತ ಹಿಡಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಹಾದೇವ್ ಕುಂಬಾರ್ ಇವರು ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅರುಣ ಮಾಚಕನೂರ್ ಅವರ ಗಮನಕ್ಕೆ ತಂದು, ಇದರಿಂದ ಎಚ್ಚೆತ್ತುಕೊಂಡ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ವಾರ್ಡ್ ನಂಬರ್ 5 ಮತ್ತು 6 ಸದಸ್ಯರಾದ ಯಲ್ಲಪ್ಪ ಸಣ್ಣಕ್ಕಿನವರ್ ಜೊತೆ ಚರ್ಚಿಸಿ, ಅವರ ಮನವೊಲಿಸಿ ಸ್ಥಳೀಯರಿಗೆ ನೀರು ಕಡ್ಡಾಯವಾಗಿ ಕೊಡಲೇಬೇಕೆಂದು ತಿಳಿ ಹೇಳಿದರು. ಇದಕ್ಕೆ ಮನೆದ ವಾರ್ಡ್ ನಂಬರ್ 5 ಮತ್ತು 6 ಸದಸ್ಯರಾದ ಯಲ್ಲಪ್ಪ ಸಣ್ಣಕ್ಕಿನವರ್ ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ನಾನು ಬೋರ್ವೆಲ್ ಮಾಡಿಸಿಕೊಂಡಿದ್ದು ನಿಜ ಸಾರ್ವಜನಿಕರಿಗೆ ನಾನು ಇನ್ನು ಮುಂದೆ ಯಾವುದೇ ರೀತಿಯಾದಂತ ತೊಂದರೆ ಕೊಡುವುದಿಲ್ಲ ಅವರು ನೀರನ್ನು ತೆಗೆದುಕೊಳ್ಳಬಹುದು ಎಂದು ಸ್ಥಳೀಯರ ಮುಂದೆ ಒಪ್ಪಿಕೊಂಡಿದ್ದಾನೆ.ಈ ಸಂದರ್ಭದಲ್ಲಿ EO ಆಗಿರುವ ಅರುಣ ಮಾಚಕನೂರ್ ಹಾಗೂ pdo ಮಹಾದೇವ ಕುಂಬಾರ ರವರು ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂರನ್ನವರ್ ತೋಟ ವಾರ್ಡ್ ನಂಬರ್ 5 ಮತ್ತು 6 ರ ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಬೆಳಕು, ಶೌಚಾಲಯ, ಸಾರಿಗೆ ಏನೇ ಇದ್ದರೂ ಕೂಡಲೇ ಸ್ಥಳಕ್ಕೆ ತೆರಳಿ ಪರಿಹರಿಸುವಂತಹ ಕೆಲಸ ಮಾಡ್ತೀವಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ವರದಿ ರಮೇಶ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು