ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮ ಪಂಚಾಯಿತಿಗೆ ಪಂಚಾಯತಿಯ ಸಮಗ್ರ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧನೆಗೆ ಗಾಂಧಿ ಪುರಸ್ಕಾರ ಲಭಿಸಿದೆ.ಈ ಸಂದರ್ಭದಲ್ಲಿ ತೆಲಸಂಗ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಬೀರಪ್ಪ ಕಡಗಂಚಿ ರವರು ಮಾತನಾಡಿ "ವಿಶ್ವಗುರು ಬಸವಣ್ಣವರ ಕಾಯಕವೇ ಕೈಲಾಸ" ನಾನುಡಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಗ್ರಾಮ ಪಂಚಾಯಿತಿಯನ್ನು ಸಮಗ್ರ ಅಭಿವೃದ್ಧಿಯನ್ನು ಸಾಧಿಸಿ ಗಾಂಧಿ ಪ್ರಶಸ್ತಿಯನ್ನು ಪಡೆಯುವುದು ನಮ್ಮ ಬಹಳ ದಿನಗಳ ಆಸೆಯಾಗಿತ್ತು ನಮ್ಮೀ ಸಮಗ್ರ ಗ್ರಾಮ ಪಂಚಾಯಿತಿಯ ವೃಂದವೆಲ್ಲವೂ ಬಹಳ ಪರಿಶ್ರಮದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟು ಕೆಲಸ ಮಾಡಿದ್ವಿ ಅದರಂತೆಯೇ ಗಾಂಧಿ ಪ್ರಶಸ್ತಿ ನೀಡುವ ಸಮಿತಿಯು ನಮ್ಮ ಹೆಮ್ಮೆ ನಮ್ಮ ಗ್ರಾಮಕ್ಕೆ ಭೇಟಿ ನೀಡಿ, ಸಮಗ್ರ ಪ್ರಗತಿಯನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ಮತ್ತು ವಿವಿಧ ಅಭಿವೃದ್ಧಿ ಕ್ಷೇತ್ರಗಳಲ್ಲಿ ವೀಕ್ಷಿಸಿ ಪರಿವೀಕ್ಷಿಸಿ ತಪಸೀಲನೆಗೆ ಒಳಪಡಿಸಿ ತೆಲಸಂಗ ಗ್ರಾಮ ಪಂಚಾಯತ್‌ಗೆ ಈ ಮಹೋನ್ನತ ಗಾಂಧಿ ಪ್ರಶಸ್ತಿಯನ್ನು ನೀಡಿದೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹೇಳಿದರು ಹಾಗೂ ಸಿಬ್ಬಂಧಿಗಳ ಸಾಮೂಹಿಕ ಪ್ರಯತ್ನಕ್ಕೆ ರಾಷ್ತ್ರೀಯ ಪ್ರಶಸ್ತಿ ಬಂದಿದೆ ಎಂದು ಭೀರಪ್ಪ ಕಡಗಂಚಿ ಕೃತಜ್ಞತೆ ಸಲ್ಲಿಸುತ್ತಾ ಸುದ್ಧಿಯನ್ನು ಕೃಷ್ಣಾ ಕಡಲು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವರದಿ : ರಮೇಶ ಕಾಂಬಳೆ ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು