.ಬೆಂಗಳೂರು: ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಪೂರ್ವಭಾವಿ ಪರೀಕ್ಷಾ ತರಬೇತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 400 ಪ.ಜಾತಿ ಹಾಗೂ 200 ಪ.ಪಂಗಡದ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿ ಶಿಶ್ಯವೇತನದೊಂದಿಗೆ ಉಚಿತ ತರಬೇತಿ ನೀಡಲಾಗುತ್ತದೆ.ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 21 ರಿಂದ 37 ವರ್ಷದೊಳಗಿರಬೇಕು. ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು. ಅಭ್ಯರ್ಥಿಗಳಿಗೆ 6 ತಿಂಗಳುಗಳ ಕಾಲ ಪೂರ್ವಭಾವಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಬಳಿಕ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ಮುಖ್ಯ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಕೊನೇ ದಿನಾಂಕದೊಳಗೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಪಡೆದಿರಬೇಕು. ಅಂಗವಿಕಲ/ ವಿದ್ಯಾರ್ಥಿನಿಲಯ/ ಕ್ರೈಸ್ ವಿದ್ಯಾರ್ಥಿನಿಲಯ/ ಸಫಾಯಿ ಕರ್ಮಚಾರಿ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯವೆಂದು ಸೂಚಿಸಲಾಗಿದೆ. ದೆಹಲಿಯಲ್ಲಿ ತರಬೇತಿ ಪಡೆಯುವವರಿಗೆ 15,000 ರೂ., ಹೈದರಾಬಾದ್ 8,000 ರೂ., ಬೆಂಗಳೂರು 6,000 ರೂ., ಹಾಗೂ ಇತರ ಸ್ಥಳಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 5,000 ರೂ. ಮಾಸಿಕ ಶಿಶ್ಯವೇತವನ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ https://bit. ly/4fjXK17 ಮೂಲಕ ಅರ್ಜಿ ಸಲ್ಲಿಸಬಹುದು.ವರದಿ :ರಮೇಶ ಕಾಂಬಳೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಮಾದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಗಳನ್ನು ನಡೆಸಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಮದಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಸರ್ವ ಸದಸ್ಯ ಮಂಡಳಿ ಮೊದಲನೆಯದ್ದು "ಜಮಾಬಂದಿ ಕಾರ್ಯಕ್ರಮ" ಎರಡನೆಯದು "ಕಾವಲು ಸಮಿತಿ ಸಭೆ" ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮದಿಹಳ್ಳಿ ಗ್ರಾಮವನ್ನು ಅಭಿವೃದ್ಧಿಯ ಹಾದಿಯತ್ತ ಕರೆದೊಯ್ಯಲು ಶ್ರಮಿಸುತ್ತಿರುವ ಮಾದಿಹಳ್ಳಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ತಳವಾರ, ಅಧ್ಯಕ್ಷರಾದ ಲಕ್ಕವ್ವ ಬಾಗಿ, ಉಪಾಧ್ಯಕ್ಷರಾದ ಕೋಮಲ್ ಹೊಸಮನಿ, ಪಶು ವೈದ್ಯಾಧಿಕಾರಿ ರಮೇಶ್ ಕದಮ, ಅಂಗನವಾಡಿ ಮೇಲ್ವಿಚಾರಕರು ಜಿ. ಎನ್. ಮಾನಗಾವಿ, ಸದಸ್ಯರಾದ ಮಾನಿಕ ಬಾಗಿ, ಗಣಪತಿ ವಾಳಕಿ, ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.