ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆ, ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮ ಪಂಚಾಯತಿಯಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 2018ರ ವಸತಿ ರಹಿತ ಆದ್ಯತೆ ಪ್ರಕಾರ 31 ಮನೆಗಳು ಮಂಜೂರು ಆಗಿದ್ದು ಎಸ್ ಸಿ ಕೋಟಾದಲ್ಲಿ ಒಂಬತ್ತು ಮನೆಗಳು ಹಾಗೂ ಉಳಿದ 22 ಮನೆಗಳು ಇತರ ಸಮುದಾಯಕ್ಕೆ ಮಂಜೂರಾಗಿದ್ದು ಜನವರಿ 1/ 2025 ಹೊಸ ವರ್ಷದ ನಿಮಿತ್ಯ ಪಂಚಾಯತಿಯಲ್ಲಿ ಗ್ರಾಮಸಭೆ ಹಮ್ಮಿಕೊಂಡಿದ್ದು ಈ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಗ್ರಾಮಸ್ಥರು ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಅಂಜನಾದೇವಿ ನಾಮದೇವ್ ಗೋಪಗೊಳ್ ಸಭೆಯಲ್ಲಿ ಮಾತನಾಡಿ ಫಲಾನುಭವಿಗಳಿಗೆ ಒಂದು ವಾರದ ಒಳಗಡೆ ಮನೆಯ ಕಟ್ಟಡವನ್ನು ಪ್ರಾರಂಭ ಮಾಡಬೇಕು ಆದಷ್ಟು ಬೇಗ ಮನೆ ಕಟ್ಟಡ ಪ್ರಾರಂಭ ಮಾಡಬೇಕು ಎಂದು ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದರು. ಹಾಗೂ ಈ ಸಭೆಯನ್ನು ಉದ್ದೇಶಿ ಮಾತನಾಡಿದ ಮಾಜಿ ಅಧ್ಯಕ್ಷ ಯುವರಾಜ ಮಲಗೌಡ ಪಾಟೀಲ್ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸುತ್ತಾ ಹೊಸ ವರ್ಷದ ಶುಭಾಶಯಗಳು ಹೇಳಿದ್ದರು ಫಲಾನುಭವಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು . ಹಾಗೂ ಪಂಚಾಯತಿ ಅಧ್ಯಕ್ಷರಾದ ಇಂದ್ರಜಿತ್ ದಿನಕರ್ ಸೋಲಂಕೂರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಫಲಾನುಭವಿಗಳಿಗೆ ಹೊಸ ವರ್ಷದ ಶುಭಾಶಯಗಳು ಹೇಳುತ್ತಾ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ ಮಾಡಿ ಸಭೆಯನ್ನು ಮುಕ್ತಾಯಗೊಳಿಸಿದರು ವರದಿ : ಎಸ ಕಾಂಬಳೆ, ನಿಪ್ಪಾಣಿ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು