ವಿಷಯಕ್ಕೆ ಹೋಗಿ
ಚಿಕ್ಕೋಡಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ವಿಜಯಲಕ್ಷ್ಮಿ ಮೊಸಳೆ ಇವರನ್ನು ಕೆಲಸದಿಂದ ವಜಾ ಮಾಡುವ ಕುರಿತು ಉಪವಿಭಾಗಾಧಿಕಾರಿಗೆ ಮನವಿ.ಮಾನ್ಯರೆ, ತಮಗೆ ತಿಳಿಸುವುದೇನೆಂದರೆ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ವಿಜಯಲಕ್ಷ್ಮಿ ಮೊಸಳೆ ಇವರನ್ನು ಕೆಲಸದಿಂದ ತಕ್ಷಣ ವಜಾ ಮಾಡಬೇಕು ಆಸ್ಪತ್ರೆಗೆ ಬಂದಂತ ಸಾರ್ವಜನಿಕರು ಹಾಗೂ ರೋಗಿಗಳಜೊತೆಗೆ ಸರಿಯಾಗಿ ಮಾತನಾಡದೆ ಸರಿಯಾಗಿ ವರ್ತಿಸದೆ ಹಾಗೂ ಸರಿಯಾಗಿ ಚಿಕಿತ್ಸೆ ನೀಡದೆ ಬರೀ ಕಾಲ್ ಹಗರಣ ಮಾಡುತ್ತಿದ್ದಾರೆ ಅದಲ್ಲದೆ ಸರಿಯಾಗಿ ಆಸ್ಪತ್ರೆಗೆ ಕೆಲಸಕ್ಕೆ ಬಾರದೆ ತಿಂಗಳ ಸಂಬಳಕ್ಕೆ ಮೀಸಲಾಗಿದ್ದಾರೆ. ಹಿಂದೆ ಕೂಡ ಒಬ್ಬ ಬಡ ಮಹಿಳೆ ಬಾಣಂತಿ ಆಸ್ಪತ್ರೆಗೆ ಡೆಲಿವರಿಗೆ ಬಂದಾಗ ಅವರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದರಿಂದ ಆ ಬಾಣಂತಿ ಮಹಿಳಿಗೆ ಚಿಕಿತ್ಸೆ ಸಿಗದೆ ಬಾಣಂತಿ ಸಾವನಪ್ಪಿದ್ದಾಳೆ.ಫೆಬ್ರವರಿ 7 ರಂದು ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಬಡ ಹೆಣ್ಣು ಮಗಳು ಗರ್ಭಿಣಿ ಶೃತಿ ರಾಜು ಬಡಿಗೇರ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಸ್ಪತ್ರೆಯಲ್ಲಿ ಆಕೆಗೆ ಆಪರೇಷನ್ ಮಾಡಿದ ನಂತರ ಆಕೆ ಹೊಟ್ಟೆಯಲ್ಲಿ ಕಾಟನ್ ವೇಸ್ಟ್ ಹಾಗೂ ಬಟ್ಟೆ ತುಂಡು ಬಿಟ್ಟು ಹೊಲಗೆ ಹಾಕಿ ನಂತರ ಮನೆಗೆ ಕಳಿಸಿರುತ್ತಾರೆ ಇಷ್ಟು ಬೇಜವಾಬ್ದಾರಿತನ ವೈದ್ಯಯನ್ನು ತಕ್ಷಣ ವಜಾ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೂಲಕ ವಿನಂತಿಸಿರುತ್ತೇವೆ ಯಂದು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ಇವರಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಜು ಬಡಿಗೇರ್ ಅಧ್ಯಕ್ಷರು ಮೋಹನ್ ಪಾಟೀಲ್ , ರಮೇಶ್ ದಂಗೆರ್ಸಂತೋಷ್ ಪೂಜಾರಿ , ಸಚಿನ್ ದೊಡ್ಡಮನಿ, ಅಮೂಲ್ ನಾವಿ ,ರುದ್ರಯ ಹಿರೇಮಠ, ರಫೀಕ್ ಪಟಾನ್, ಶಂಕರ್ ಡಾಂಗೆರ್, ರಮೇಶ್ ಪಾಟೀಲ್, ಅಪಸಾಬ್ ಹೀರೆ ಕೂಡಿ, ಮಾಳು ಕರೆನ್ನವರ್, ಶುಭಂ ಮಧಾಳೆ ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು