ವಿಷಯಕ್ಕೆ ಹೋಗಿ
ಕೇರೂರ : ಪ್ರತಿ ವರ್ಷದಂತೆ ಈ ವರ್ಷವೂ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ -ಶ್ರೀ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ.ಬುಧವಾರ ದಿ 05/03/2025 ರಂದು ಪ್ರಾರಂಭ ರಾತ್ರಿ ಮಾದಿಗರ ಓನಿಯಿಂದ ಚಮ್ಮಾಳಿಗೆಯನ್ನು ಗದ್ದುಗೆಯ ಮನೆಗೆ ತರುವುದು ಗುರುವಾರ ದಿ 06/03/2025 ರಂದು ಮಧ್ಯಾಹ್ನ 12.00 ಘಂಟೆಗೆ ಪಲ್ಲಕಿಯು ಗದ್ದುಗೆಯ ಮನೆಯಿಂದ ವಾಧ್ಯ ಮೇಳದೊಂದಿಗೆ ಬನಕ್ಕೆ ತಲುಪುವುದು ಮತ್ತು ಕರಿ ಕಟ್ಟುವುದು ಶುಕ್ರವಾರ ದಿ07/03/2025 ರಂದು ಓಡುವ ಶರ್ಯತ್ತು, ಜನರಲ ಸಾಯಕಲ ಶರ್ಯತ್ತು, ಕುದುರೆ ಶರ್ಯತ್ತು, ಗಿಗಿ ಪದಗಳು, ಶನಿವಾರ ದಿ 08/03/2025 ರಂದು ಒಂದು ಕುದುರೆ ಒಂದು ಎತ್ತುಗಾಡಿ ಶರ್ಯತ್ತು, ಜೋಡು ಕುದುರೆ ಗಾಡಿ ಶರ್ಯತ್ತು, ಜೋಡೆತ್ತಿನ ಗಾಡಿ ಶರ್ಯತ್ತು, ಡೊಳ್ಳಿನ ಪದಗಳು ರವಿವಾರ ದಿ 09/03/2025 ರಂದು ಮಹಾನೈವದ್ಯ,ದನಗಳ ಭವ್ಯ ಪ್ರದರ್ಶನ, ಸೋಮವಾರ ದಿ 10/03/2025 ಮುಂಜಾನೆ 8:00 ಗಂಟೆಗೆ ನಿವಾಳಕಿ ಹಾಗೂ ದೇವವಾಣಿ ಅಭಿಷೇಕ ಹಾಗೂ ರಾತ್ರಿ 8:00 ಗಂಟೆಗೆ ಪಲ್ಲಕ್ಕಿ ಬನದಿಂದ ಗದ್ದುಗೆಯ ಮನೆಗೆ ಬರುವುದು, ಅನ್ನಪ್ರಸಾದ ಹಾಗೂ ಲೈಟಿಂಗ್ ಡೆಕೋರೇಷನ್ ಶ್ರೀ ಅರಣ್ಯಸಿದ್ದೇಶ್ವರ ಕಾಮಗಾರ ಕಮಿಟಿ ಮುಂಬಯಿ ಇವರಿಂದ ಏರ್ಪಡಿಸಲಾಗಿದೆ. ಹೀಗೆ ಹಲವಾರು ಕಾರ್ಯಕ್ರಮಗಳೊಂದಿಗೆ ಜಾತ್ರೆಯನ್ನು ಅದ್ದೂರಿಯಾಗಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಲ್ಲ ಭಕ್ತಾದಿಗಳು ದೇವರ ದರ್ಶನ ಪಡೆದು ಪಾವನರಾಗಬೇಕೆಂದು ಶ್ರೀ ಮಲಕಾರಿಸಿದ್ದೇಶ್ವರ- ಶ್ರೀ ಅರಣ್ಯಸಿದ್ದೇಶ್ವರ ಜಾತ್ರಾ ಕಮಿಟಿ ಕೇರೂರ ವತಿಯಿಂದ ವಿನಂತಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು