ವಿಷಯಕ್ಕೆ ಹೋಗಿ
ರಾಯಬಾಗ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೀರೆಮ್ಯಾಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ.ರತ್ಮಮ್ಮಾ ರವರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ರಾಯಬಾಗ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಸುರೇಶ ಕದ್ದು ರವರ ಮುಖಾಂತರ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿ ಹಾಗೂ ಗ್ರಾಮ ಪಂಚಾಯತ ಸದಸ್ಯತ್ವ ರದ್ದು ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲು ವಿನಂತಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ರಾಯಬಾಗ ವತಿಯಿಂದ ಉಮೇಶ ಭೂಪಾಲ ಪೋಳ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರುಗಳಾದ ಅರುಣ ಮಾಚಕನೂರ, ವಾಸುದೇವ ಶಿರಾ, ಪಿಡಿಒಗಳಾದ ಶ್ರೀಕಾಂತ ಪಾಟೀಲ, ಭಗವಂತ ಮಸಾಲಜಿ, ಮಲ್ಲು ಗುಳೇದಾರ, ಭರಮು ನಾಗನೂರ, ಮಹಾದೇವ ಕುಂಬಾರ, ರಾಮಗೌಡ ಪಾಟೀಲ, ಮುತ್ತು ಶಿವಾಪೂರ, ಸಂಗಪ್ಪ ನ್ಯಾಮಗೌಡ, ಸುವರ್ಣ ಕಲ್ಲೋಳಿಕರ, ಸೌಜನ್ಯ ಪ್ರಭಾಕರ, ಗೀತಾ ಜಿರಲಿ, ಶೋಭಾ ಪೂಜೇರಿ, ದತ್ತಾ ಸಾವಂತ, ನಿಂಗಪ್ಪ ಪಾಟೀಲ, ಸುರೇಶ ಮೇಖಳಿ, ರವಿ ಮಠಪತಿ, ಶ್ರೀಶೈಲ ವಸ್ತ್ರದ, ಮಹಾದೇವ ನಡುವಿನಮನಿ, ನೂರಅಹಮ್ಮದ ಕುಡಚಿ, ಹಣಮಂತ ಖಿಲಾರೆ, ಮಂಜುನಾಥ ಸೇರಿದಂತೆ ಎಲ್ಲಾ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು