ವಿಷಯಕ್ಕೆ ಹೋಗಿ
ಚಿಕ್ಕೋಡಿ : ಸುಮಾರು ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಘೋಷನೆ ಆಗದೇ ಇರುವುದು ಹಾಗೂ ಇತರೇ ಅಭಿವೃದ್ಧಿ ಕಾರ್ಯಗಳು ಆಗದೇ ಇರುವುದರ ಕುರಿತು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡುಗೇರ ಇವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ಕರೆಯಲಾಗಿತ್ತು. ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಈಗಿರುವ ಬಜೆಟ್ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಆಗಬೇಕು, ಕಳೆದ ಮೂರು ದಶಕಗಳಿಂದ ನಮ್ಮ ಹೋರಾಟ ನಿರಂತರವಾಗಿದೆ, ಈ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗದೇ ಇದ್ದಲ್ಲಿ ತೆಲಂಗಾನಾ ಮಾದರಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು. ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಈಗಿರುವ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಸರಕಾರ ಅಂತಾ ಹೇಳಿಕೊಳ್ಳುತ್ತಲಿದೆ, ಇವರ ಪಂಚ ಯೋಜನೆಗಳಿಂದ ರಾಜ್ಯದ ಇತರ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಚಿಕ್ಕೋಡಿ ಜಿಲ್ಲೆ ಮಾಡ್ತೇವಿ ಅಂತಾ ಹೇಳಿದ ಮುಖ್ಯಮಂತ್ರಿಗಳು ಹಾಗೂ ಇತರೇ ಜನಪ್ರತಿನಿಧಿಗಳು ಚುನಾವಣೆಗೆ ಮಾತ್ರ ಹೇಳಿಕೆ ನೀಡಿದ್ರಾ ಎಂಬ ಪ್ರಶ್ನೆ ಕಾಡುತ್ತಲಿದೆ, ಒಂದು ವೇಳೆ ಇವರದ್ದು ನುಡಿದಂತೆ ನಡೆದ ಸರಕಾರ ಅಂತಿದ್ದರೆ ಈ ಬಜೆಟ್ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಿ ಎಂದು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ರುದ್ರಯ್ಯಾ ಹಿರೇಮಠ, ಜಿಲ್ಲಾ ಹೋರಾಟಗಾರರಾದ ಮೋಹನ ಪಾಟೀಲ, ಸಚೀನ ದೊಡ್ಡಮನಿ, ರಫೀಕ ಪಠಾಣ, ಸೇರಿದಂತೆ ಹಲವಾರು ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು