ವಿಜಯಪುರ- ತೊಂದರೆಯಲ್ಲಿರುವವರಿಗೆ ಯಾವುದೇ ಪ್ರತಿಫಲಾಪೆಕ್ಷೆಯಿಲ್ಲದೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಸ್ವಾರ್ಥ ಸೇವೆಯಾಗುತ್ತದೆ ಎಂದು ಆರ್ಟ ಆಫ್ ಗಿವಿಂಗ್ ಫೌಂಡೇಶನದ ರಾಷ್ಟ್ರೀಯ ರಾಯಭಾರಿ ಶಿಫಾ ಜಮಾದಾರ ನುಡಿದರು. ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾ ಭವನದಲ್ಲಿ ಆರ್ಟ ಆಫ್ ಗಿವಿಂಗ್ ಫೌಂಡೇಶನ್ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಆರ್ಟ ಆಫ್ ಗಿವಿಂಗ್ ಫೌಂಡೇಶನದ ಸ್ಥಾಪನಾ ದಿನಾಚರಣೆ ಅಂಗವಾಗಿ ನೆರೆಯವರ ಉತ್ತಮ ಬಾಂಧವ್ಯ ಎಂಬ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸುಂದರ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸೇವಾಮನೋಭಾವ, ನೆರೆಯವರ ಜೊತೆ ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು. ಜೀವನದಲ್ಲಿ ಆನಂದದ ಕ್ಷಣಗಳು ಹೇಳಿ ಬರುವದಿಲ್ಲ ಬಂದಾಗ ಚಿಕ್ಕ ಚಿಕ್ಕ ಆನಂದವನ್ನು ಸವಿಯುವ ಕಲೆಯನ್ನು ಬೆಳೆಸಿಕೊಳ್ಳಬೇಕು. ನಿರ್ಗತಿಕರ, ಬಲಹಿನರ, ಮಹಿಳೆಯರ, ಮಕ್ಕಳ ಸಹಾಯ ಮಾಡಿದಾಗ ಅದರ ಫಲ ನಮಗೆ ದ್ವಿಗುಣ ರೀತಿಯಲ್ಲಿ ಮರಳಿ ಸಿಗುತ್ತದೆ ಎಂದರು. ದಾನ ಕಲೆ ಎಂದರೆ ದಯೆ ಮತ್ತು ಹೌದಾರ್ಯದ ಮೂಲಕ ಬೇಷರತ್ತಾದ ಮತ್ತು ಸುತ್ತಿರವಾದ ಪ್ರೀತಿ, ಶಾಂತಿ ಮತ್ತು ಸಂತೋಷ ಹಾಗೂ ಸಂತೃಪ್ತಿಯನ್ನು ಸೃಷ್ಟಿಸುವುದು ನಿಜವಾದ ದಾನ ಎಂದರು. ಆರ್ಟ ಆಫ್ ಗಿವಿಂಗ್ ಫೌಂಡೇಶನದ ರಾಷ್ಟ್ರೀಯ ಸಂಯೋಜಕ ಡಾ. ಜಾವಿದ ಜಾಮದಾರ ಮಾತನಾಡುತ್ತ ಓಡಿಸ್ಸಾ ರಾಜ್ಯದ ಭುವನೇಶ್ವರ ನಗರದಲ್ಲಿ ಡಾ. ಅಚ್ಚುತಾ ಸಾಮಂತ ಎಂಬ ವ್ಯಕ್ತಿ ೪೦ ಸಾವಿರ ಮಕ್ಕಳಿಗೆ ದೇಶಾದ್ಯಾಂತ ೯೦ ಸಾವಿರ ಮಕ್ಕಳಿಗೆ ಕೆ.ಜಿ. ಯಿಂದ ಪಿ.ಜಿ.ವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅದರಂತೆ ಆರ್ಟ ಆಫ್ ಗಿವಿಂಗ್ ಫೌಂಡೇಶನ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇಂದು ಫೌಂಡೇಶನದ ಸ್ಥಾಪನಾ ದಿನಾಚರಣೆಯನ್ನು ೧೬೦ ವಿವಿಧ ರಾಷ್ಟ್ರಗಳಲ್ಲಿ ದೇಶದ ೩೦ ರಾಜ್ಯದ ೩೮೦ ಜಿಲ್ಲೆಯಲ್ಲಿ ಏಕಕಾಲಕ್ಕೆ ಆಚರಿಸುತ್ತಿದ್ದೇವೆ. ಒಬ್ಬರಿಗೊಬ್ಬರಿಗೆ ಸಹಾಯ ಮಾಡುವುದು ಅತ್ಯವಶ್ಯಕ ಸಮಾಜದಲ್ಲಿ ಬದುಕಲು ಪರಸ್ಪರ ಸಹಾಯ ಸಹಕಾರ ಅನಿವಾರ್ಯವಾಗಿದೆ. ನಾವು ಮಾಡುವ ಚಿಕ್ಕ ಸಹಾಯಗಳು ಕೂಡ ಬೇರೆಯವರ ಜೀವನವನ್ನು ಉತ್ತಮ ಪಡಿಸುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡುತ್ತ ಯುವಶಕ್ತಿ ಸರಿಯಾದ ರೀತಿಯಲ್ಲಿ ಬೆಳೆಯಬೇಕು. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುವದರ ಜೊತೆಗೆ ಬೇರೆಯವರಿಗೆ ಸಹಾಯ ಮಾಡುವ ಸಂಸ್ಕೃತಿ ಮತ್ತು ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು. ಇರುವ ಅವಕಾಶಗಳನ್ನು ಬಳಸಿಕೊಂಡು ಸೇವೆಯೇ ನಮ್ಮ ಮಾನವ ಧರ್ಮ ಎಂದು ಅರ್ಥ ಮಾಡಿಕೊಳ್ಳಬೇಕು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆದರೆ ನಿಸ್ವಾರ್ಥ ಸಮಾಜ ಕಟ್ಟಬಹುದು. ಸಾಮಾಜಿಕ ಜಾಲತಾಣದಲ್ಲಿ ದೇಶಭಕ್ತಿ, ಸಮಾಜಸೇವೆ ಗುಣ ಪ್ರದರ್ಶಿಸಿದ ನಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೋ. ಅಚ್ಚುತಾ ಸಾಮಂತ ಆರ್ಟ ಆಫ್ ಗಿವಿಂಗ್ ಫೌಂಡೇಶನ್ ಮುಖಾಂತರ ವಿಶ್ವದಲ್ಲಿಯೇ ಶಿಕ್ಷಣ ಕ್ರಾಂತಿ ಹಾಗೂ ಸಾಮಾಜಿಕ ಸೇವಾ ಮನೋಭಾವದ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಅಶೋಕ ಸುರಪೂರ, ಪ್ರೊ. ವಿಷ್ಣು ಶಿಂಧೆ, ಪ್ರೊ. ಕಲಾವತಿ ಕಾಂಬಳೆ, ಮಾತನಾಡಿದರು. ಕಾರ್ಯನಿರ್ವಾಹಕ ಅಭಿಯಂತಕ ಎಂ.ಪಿ. ಕದಮ, ಡಾ. ಪ್ರಜಾಪತಿ, ಡಾ. ಗುಲಾಬ ರಾಠೋಡ, ಪ್ರೀತಿ ಪತ್ತಾರ, ಯುಸೂಫ ಕೊಟ್ಟಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗಾಗಿ ಸಮಾಜಸೇವೆ ರಾಷ್ಟ್ರದ ಕುರಿತಂತೆ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಪೂಜಾ ಬಿರಾದಾರ ಸ್ವಾಗತಿಸಿದರು. ಭಾಗ್ಯಶ್ರೀ ಕೋಲಕಾರ ವಂದಿಸಿದರು. ಅರ್ಚನಾ ನಿರೂಪಿಸಿದರು.ವರದಿ : ಡಾ.ಜಾವಿದ ಜಮಾದಾರ,ವಿಜಯಪುರ .

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಮಾದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಗಳನ್ನು ನಡೆಸಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಮದಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಸರ್ವ ಸದಸ್ಯ ಮಂಡಳಿ ಮೊದಲನೆಯದ್ದು "ಜಮಾಬಂದಿ ಕಾರ್ಯಕ್ರಮ" ಎರಡನೆಯದು "ಕಾವಲು ಸಮಿತಿ ಸಭೆ" ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮದಿಹಳ್ಳಿ ಗ್ರಾಮವನ್ನು ಅಭಿವೃದ್ಧಿಯ ಹಾದಿಯತ್ತ ಕರೆದೊಯ್ಯಲು ಶ್ರಮಿಸುತ್ತಿರುವ ಮಾದಿಹಳ್ಳಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ತಳವಾರ, ಅಧ್ಯಕ್ಷರಾದ ಲಕ್ಕವ್ವ ಬಾಗಿ, ಉಪಾಧ್ಯಕ್ಷರಾದ ಕೋಮಲ್ ಹೊಸಮನಿ, ಪಶು ವೈದ್ಯಾಧಿಕಾರಿ ರಮೇಶ್ ಕದಮ, ಅಂಗನವಾಡಿ ಮೇಲ್ವಿಚಾರಕರು ಜಿ. ಎನ್. ಮಾನಗಾವಿ, ಸದಸ್ಯರಾದ ಮಾನಿಕ ಬಾಗಿ, ಗಣಪತಿ ವಾಳಕಿ, ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.