ವಿಷಯಕ್ಕೆ ಹೋಗಿ
ಲೋಂಡಾ : ದಿನಾಂಕ 26-06-2025 ರಂದು ಸಾಯಂಕಾಲ ಸುಮಾರು 5 ಗಂಟೆಗೆ ಬಂದ ಖಚಿತ ಮಾಹಿತಿ ಮೇರೆಗೆ, ಲೋಂಡಾ ವಲಯದ ನೇರಸೆ ಬೀಟ್‌ನಲ್ಲಿ ಒಂದು ಕಡವೆಯನ್ನು (Rusa unicolor) ಬೇಟೆಯಾಡಿದ ಬಗ್ಗೆ ತಿಳಿದುಬಂದಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ನೇರಸೆ ಅರಣ್ಯ ಸರ್ವೆ ನಂಬರ್ 102 ರ ಪಕ್ಕದಲ್ಲಿರುವ ಮಾಲ್ಕಿ ಸರ್ವೆ ನಂಬರ್ 104/2 ರಲ್ಲಿ ಒಟ್ಟು 9 ಜನ ಆರೋಪಿಗಳು ಕಡವೆಯನ್ನು ಬೇಟೆಯಾಡಿರುವುದು ಖಚಿತಪಟ್ಟಿದೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, 44, 50, 51 ರ ಅಡಿಯಲ್ಲಿ ಲೋಂಡಾ ವಲಯ ಅಪರಾಧ ಸಂಖ್ಯೆ: 07/2025-26 ರಂತೆ ಪ್ರಕರಣ ದಾಖಲಿಸಿ, ದಿನಾಂಕ 27/06/2025 ರಂದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು:ಬೆಳಗಾವಿ ವೃತ್ತದ ಮಾನ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮಂಜುನಾಥ ಚವ್ಹಾಣ ಮತ್ತು ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮರಿಯಾ ಕ್ರಿಸ್ತು ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಶ್ರೀಮತಿ ಸುನಿತಾ ನಿಂಬರಗಿ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಖಾನಾಪೂರ ಉಪ ವಿಭಾಗ), ಶ್ರೀ ಶ್ರೀಕಾಂತ ಪಾಟೀಲ (ವಲಯ ಅರಣ್ಯ ಅಧಿಕಾರಿ, ಖಾನಾಪೂರ), ಶ್ರೀ ಸಯ್ಯದಸಾಬ ನಧಾಫ (ವಲಯ ಅರಣ್ಯ ಅಧಿಕಾರಿ, ಭೀಮಗಡ), ಮತ್ತು ಶ್ರೀ ವೈ.ಎಸ್ ಪಾಟೀಲ (ಉಪ ವಲಯ ಅರಣ್ಯಾಧಿಕಾರಿ, ಲೋಂಡಾ) ಹಾಗೂ ಖಾನಾಪೂರ ಮತ್ತು ಭೀಮಗಡ ವಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆರೋಪಿಗಳು: * ರಂಜಿತ್ ಜೈಸಿಂಗ್ ದೇಸಾಯಿ, ಸಾ: ನೇರಸೆ * ಬಲವಂತ ನಾರಾಯಣ ದೇಸಾಯಿ, ಸಾ: ನೇರಸೆ * ಆತ್ಮಾರಾಮ ಯಲ್ಲಪ್ಪ ದೇವಳಿ, ಸಾ: ನೇರಸೆ * ಪ್ರಮೋದ ನಾಮದೇವ ದೇಸಾಯಿ, ಸಾ: ನೇರಸೆ * ದತ್ತರಾಜ ವಿಲಾಸ ಹವಾಲದಾರ, ಸಾ: ನೇರಸೆ * ಜ್ಞಾನೇಶ ಮಂಗೇಶ ಗಾವಡೆ, ಸಾ: ನೇರಸೆ * ಗೋವಿಂದ ರಾಮಚಂದ್ರ ದೇಸಾಯಿ, ಸಾ: ನೇರಸೆ * ಅಪ್ಪಿ ಇಂಗಪ್ಪಾ ಹಣಬರ, ಸಾ: ನೇರಸೆ * ಬರಾಪ್ಪಾ ಬಾಬು ಹಣಬರ, ಸಾ: ನೇರಸೆ. ವರದಿ : ಮೋಸಾ ನದಾಫ್, ಖಾನಾಪೂರ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು