ವಿಷಯಕ್ಕೆ ಹೋಗಿ
ಹುಕ್ಕೇರಿ : ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಯ ವತಿಯಿಂದ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಸಲಹಾ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿಗಳಾದ ಪಿ ಆರ್ ಮಲ್ಲಾಡದ ರವರು ಮಾತನಾಡಿ ಅರಿವು ಕೇಂದ್ರ ಸಲಹಾ ಸಮಿತಿ ಸದಸ್ಯರಿಗೆ ಅರಿವು ಕೇಂದ್ರದ ಮಹತ್ವ, ಕಾರ್ಯಗಳು, ಉದ್ದೇಶಗಳ ಪ್ರತಿ ಘಟಕಾಂಶಗಳ ಕುರಿತು ಸವಿಸ್ತಾರವಾಗಿ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವನಾಧಿಕಾರಿಗಳಾದ ಪಿ ಆರ್ ಮಲ್ಲಾಡದ, ಅವಿನಾಶ ಹೊಳೆಪುಗೋಳ ವ್ಯವಸ್ಥಾಪಕರು ತಾಲೂಕು ಪಂಚಾಯತ್ ಹುಕ್ಕೇರಿ, ವಿಷಯನಿರ್ವಾಹಕರು ಕಿರಣ ಅಂಬೇಡ್ಕರ, ಪಂಚಾಯತ್ ರಾಜ್ಯ ಕೇಂದ್ರೀಕೃತ ತರಬೇತಿ ಸಂಯೋಜಕರು ಉಮಾ ಎಮ್ಮಿ, ಸಂಗೀತಾ ಮಸರಗುಪ್ಪಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಸಲಹಾ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಹಾಜರಿದ್ದರು.ವರದಿ - ರಮೇಶ ಕಾಂಬಳೆ.ಹುಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು