ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ಮಹಾದೇವಿ ಶಿವಪುತ್ರಯ್ಯ ಹಿರೇಮಠ ಎಂಬ ಮಹಿಳೆಯ 1ಎಕರೆ 17ಗುಂಟೆ ಜಮೀನನ್ನು ಸರ್ವೆ ನಂಬರ 198/1 ನ ಮೂಲ ಮಾಲೀಕರಾದ ಮಹಾದೇವಿ ಶಿವಪುತ್ರಯ್ಯ ಹಿರೇಮಠ ವಯಸ್ಸು 61 ಅವರಿಗೆ ಗೊತ್ತಿಲ್ಲದೆ ಅಂದರೆ ಫ್ರಾಢ ಮಾಡಿ ಗಂಗವ್ವ ಮುದಪಾಕಿ ಎಂಬ ಮಹಿಳೆ ಮೂಲತ ಉಳ್ಳಾಗಡ್ಡಿ ಖಾನಾಪುರ ಹಾಲಿ ಶಿರಡಾಣ್ ಗ್ರಾಮದ ಗಿರಿಮಲ್ಲಯ್ಯ ಕೆಂಪಯ್ಯ ನಿರ್ವಾಣಿ ಓರ್ವರಿಗೆ 03/05/2025 ರಂದು ಖರೀದಿ ಮಾಡಿ ಕೊಟ್ಟಿದ್ದಾರೆ. ಇಲ್ಲಿ ಪ್ರಮುಖವಾಗಿ ತಪ್ಪಿತಸ್ತರು ತಾಲೂಕ ಆಡಳಿತ ಮೇಲೆಯೇ ಗಂಬಿರವಾಗಿ ಆಕ್ರೋಶ ಗೊಂಡ ಮಹಾದೇವಿ ಶಿವಪುತ್ರಯ್ಯ ಹಿರೇಮಠ "ಅಧಿಕಾರಿಗಳ ಶಾಮಿಲು ಇಲ್ಲದೆ ನಮ್ಮ್ ಜಮೀನು ಮಾರಾಟ ಹೇಗಾಯ್ತು" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೂ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ರೆವ್ಯೂನು ಇನ್ಸ್ಪೆಕ್ಟರ್ ಹಾಗೂ ಉಪ ನೊಂದನಾಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಂಡು ತಪಿತಸ್ತ ಅಧಿಕಾರಿಗಳನ್ನು ಅಮಾನತು ಮಾಡಿ ಹೆಚ್ಚಿನ ಪರಿಶೀಲನೆ ಮಾಡಿ ಫ್ರಾಢ ಮಾಡಿದವರ ವಿರುದ್ದ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇನ್ನೂ ಖರೀದಿ ಸಮಯದಲ್ಲೂ ಕೂಡಾ (scanning) ಚಿತ್ರಶೋಧನೆ ಮಾಡುವಾಗ ಮುಖ ಪರಿಚಯ ಹತ್ತಲ್ಲಿಲವೆ ?ಅಥವಾ ಒಟಿಪಿ ಯಾರಿಗೆ ಕಳುಹಿಸಿದರು ? ಎಂಬ ಯಕ್ಷಪ್ರಶ್ನೆಗೆ ನೊಂದನಾಧಿಕಾರಿಗಳು ಉತ್ತರಿಸಬೇಕಿದೆ. ಇನ್ನೂ ಇಂತಹ ಅನೇಕ ಹಗರಣಗಳು ಬೆಳಕಿಗೆ ತರಲು ಲೋಕಾಯುಕ್ತ ಅಧಿಕಾರಿಗಳು ಕಡತ ಪರಿಶೀಲಿನಗೆ ಬರಬೇಕಾಗಿದೆ. ಒಟ್ಟಿನಲ್ಲಿ ತಾಲೂಕ ಆಡಳಿತ ಒಳ ಸಂಚಿಗೆ ಅನೇಕ ರೈತರ ಜಮೀನು ಎಲ್ಲೆಲ್ಲೂ ಖರೀದಿ ಆಗಿ ಹೊರಟಿವೆ ತಾಲೂಕು ದಂಡಧಿಕಾರಿಗಳು ಇದನ್ನ ಗಂಬಿರವಾಗಿ ಪರಿಗಿಣಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕಿದೆ... ವರದಿ: ಸಂತೋಷ ಪಾಟೀಲ, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು