ವಿಷಯಕ್ಕೆ ಹೋಗಿ
ರಾಯಬಾಗ ತಾಲೂಕಿನ ಕೆಮಲಾಪುರ ಗ್ರಾಮದ ಮಹೇಶ ಗುಡೋಡಗಿ ಅವರ ತೋಟದಲ್ಲಿ ಡಾಕ್ಟರ್ ಮಹಾಂತೇಶ್ ಕುಂಚನೂರ್ ಡಾಕ್ಟರ್ ಶಿವಾನಂದ್ ಬುಲ್ ಬುಲಿ ಇವರ ಗಳಿಗೆ ಸತ್ಕಾರ ಸಮಾರಂಭ ನಡೆಯಿತು. ಮೂಲತಹ ರಾಯಬಾಗ ತಾಲೂಕಿನ ಎಲ್ಪಾರಟ್ಟಿ ಗ್ರಾಮದವರಾದ ಮಹಾಂತೇಶ ಕುಂಚನೂರ ರವರು ನಿಪ್ಪಾಣಿ ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಅವರು ಮಂಡಿಸಿದ "ಅಂಡ್ ಎಮ್ಹೂಲೇಶನ ಆಫ ಎಂಟಿ ಇನ್ ಫ್ಲೆಮ್ಯಾಟರಿ ಹರ್ಬಲ್ ಪ್ರಿಪರೇಷನ್ ಬೈಕ್ ಕ್ವಾಲಿಟಿ ಬೈ ಅಪ್ರೋಚ್" ಎಂಬ ಪ್ರಬಂಧಕ್ಕೆ ಕೆಎಲ್ಇ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಸಂದಿದೆ. ಬೆಳಗಾವಿಯ ಕೆಎಚ್ಇಆರ್, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿಯ ಪ್ರಾಧ್ಯಾಪಕ ಡಾಕ್ಟ್ರು ವಿ ಎಸ್ ಮಣ್ಣೂರ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಲಭ್ಯವಾಗಿದೆ. ಡಾಕ್ಟರ್ ಮಹಾಂತೇಶ ಕುಂಚನೂರ್ ಹಾಗೂ ಶಿವಾನಂದ್ ಬುಲಬುಲಿ ಅವರಿಗೆ ಶ್ರೀ ಶ್ರೀ ಶಿವಾನಂದ ಭಾರತಿ ಪ್ರೌಢಶಾಲೆಯ 2000 - 2001 ನೇ ಸಾಲಿನ ಬ್ಯಾಚ್ ಗೆಳೆಯರ ಬಳಗ ದವರು ಸತ್ಕರಿಸಿ ಅಭಿನಂದಿಸಿದರು, ಹಾಗೂ ಪ್ರಾಥಮಿಕ ಪ್ರೌಢ ಹಂತಗಳಲ್ಲಿ ವಿದ್ಯೆಯನ್ನು ದಾರೆ ಏರಿದ ಗುರುಗಳನ್ನು ಸಹ ಸತ್ಕರ್ಷಿ ಅಭಿನಂದಿಸಿದರು.ಈ ಸಮಾರಂಭದ ಪಾವನ ಸಾನಿಧ್ಯವನ್ನು ಅಲಂಕರಿಸಿರುವ ಶ್ರೀ ಕಾಡಯ್ಯ ಹಿರೇಮಠ ಸ್ವಾಮಿಗಳು ಶ್ರೀಯುತರು ಸಾಧನೆಗೆ ನಿಷ್ಠೆ ಮತ್ತು ಛಲ ಇವುಗಳು ನಾವುಗಳು ಜೀವನದಲ್ಲಿ ಯಾವುದೇ ಗುರಿಯನ್ನು ಮುಟ್ಟಬೇಕಾದರೆ ನಿಷ್ಠೆ ಮತ್ತು ಛಲ ಇರಬೇಕೆಂದರು ಅದೇ ರೀತಿ ಯಾವುದು ಭಾಗತೈತಿ ಅದು ತಾಳತೈತಿ, ಯಾವುದು ತಾಳತೈತಿ ಅದು ಬಾಳತೈತಿ, ಒಟ್ಟಿನಲ್ಲಿ ವಿನಯ, ನಮ್ರತೆ, ಸಬ್ಬುದ್ದಿ, ಒಳ್ಳೆಯ ಸಂಸ್ಕಾರ ಇಂತಹ ಗುಣಗಳನ್ನು ನಾವು ಅಳವಡಿಸಿಕೊಂಡರೆ ಎಲ್ಲ ಪ್ರಶಸ್ತಿಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂಬೆಂತಹ ಹಿತ ಮಾಧುರ್ಯ ಆಶೀರ್ವಚನವನ್ನು ನೀಡಿದರು. ಈ ಸಂದರ್ಭದಲ್ಲಿ ವಿದ್ಯೆಯನ್ನು ಧಾರೆಯೆರೆದ ವಿದ್ಯಾ ಗುರುಗಳಾದ ಬಿಎಮ್ ಚಿಪ್ಪಾಡಿ, ಈ ಎನ್ ಸಲಬಣ್ಣವರ, ಸಿ ಎಸ್ ಬಿದರಿ, ಎಸ್ ಜಿ ದೇಶಪಾಂಡೆ. ಪಿ ಬಿ ಗುಡೋಡಗಿ. ಆರ್ ಬಿ ಕಾಂಬಳೆ. ಬಿ ಎಲ್ ಜಂಬಗಿ. ಪ್ರದೀಪ ರತ್ನಾಕರ್. ಹಾಗೂ ಸ್ನೇಹ ಬಳಗ ಎಲ್ಲರೂ ಉಪಸ್ಥಿತರಿದ್ದರು ವರದಿ - ರಮೇಶ್ ಕಾಂಬಳೆ, ರಾಯಬಾಗ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು