ವಿಷಯಕ್ಕೆ ಹೋಗಿ
ರಾಯಬಾಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಇದರ ಸನ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶನಿವಾರ ದಿನಾಂಕ:02.08.2025ರಂದು ಮಧ್ಯಾಹ್ನ:03.00ಘಂಟೆಗೆ ರಾಯಬಾಗ ಸರ್ಕಾರಿ ನೌಕರರ ಭವನದಲ್ಲಿ ಕರೆಯಲಾಗಿದ್ದು, ಸಭೆಯಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ, ಸನ್ 2024-25ನೇ ಸಾಲಿನ ಕಾರ್ಯ ಕಲಾಪಗಳ ಸಂಕ್ಷಿಪ್ತ ವರದಿ, ಜಮಾ ಖರ್ಚುಗಳನ್ನು ಅನುಮೋದಿಸುವುದು, ಸನ್ 2025-26ನೇ ಸಾಲಿನ ಅಂದಾಜು ಆಯ-ವ್ಯಯ ಅನುಮೋದನೆ, ಸಾಲರಿ ಪ್ಯಾಕೇಜ್ ಹಾಗೂ ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸುವ ಕುರಿತು ತಾಲೂಕಿನ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ರಾಯಬಾಗ ತಾಲೂಕು ಶಾಖೆ ಅಧ್ಯಕ್ಷ ಉಮೇಶ ಪೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ* ಈ ಸಂದರ್ಭದಲ್ಲಿ ಸಿದ್ದಲಿಂಗ ನರಗಟ್ಟಿ ಖಜಾಂಚಿ. ಮಲ್ಲಿಕಜಾನ್ ಕೊಬೃ ರಾಜ್ಯ ಪರಿಷತ್ ಸದಸ್ಯರು. ಬಿ ಎಲ್ ಗಂಟಿ ಗೌರವಾಧ್ಯಕ್ಷರು. ವಿನೋದ್ ಚೌಹಾನ್ ಜಿಲ್ಲಾ ಸಹ ಕಾರ್ಯದರ್ಶಿ. ಸತೀಶ ಜಾದವ್ ಹಿರಿಯ ಉಪಾಧ್ಯಕ್ಷರು ಇತರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ವರದಿ - ರಮೇಶ ಕಾಂಬಳೆ ರಾಯಭಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು