ವಿಷಯಕ್ಕೆ ಹೋಗಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘತಾಲೂಕಾ ಶಾಖೆ: ರಾಯಬಾಗ,ಶೈಕ್ಷಣಿಕ ಜಿಲ್ಲೆ:ಚಿಕ್ಕೋಡಿ. ಸನ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ತಿಳುವಳಿಕೆ ನೋಟೀಸ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ:ರಾಯಬಾಗ ಇದರ ಸನ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಶ್ರೀ.ಉಮೇಶ ಭೂಪಾಲ ಪೋಳ ಇವರ ಅಧ್ಯಕ್ಷತೆಯಲ್ಲಿ ಶನಿವಾರ ದಿನಾಂಕ:02.08.2025ರಂದು ಸಂಜೆ: 03-00 ಘಂಟೆಗೆ ರಾಯಬಾಗ ಸರ್ಕಾರಿ ನೌಕರರ ಭವನದಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಸಭೆಯನ್ನು ನಿಗದಿಪಡಿಸಲಾಗಿದೆ, ಪ್ರಯುಕ್ತ ಮಾನ್ಯ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು, ಖಜಾಂಚಿ, ಸರ್ವ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ಸರ್ವ ಸದಸ್ಯರುಗಳು ಸಕಾಲಕ್ಕೆ ಆಗಮಿಸಿ ಸಭೆಯ ಕಾರ್ಯ ಕಲಾಪಗಳನ್ನು ಯಶಸ್ವಿಗೊಳಿಸಲು ಕೋರಲಾಗಿದೆ.ವಿಷಯ ಸೂಚಿ1. ಪ್ರಾರ್ಥನೆ 2. ಸ್ವಾಗತ.3. ಮಹಾಸಭೆಯ ವಿಷಯ ಸೂಚಿ ಓದಿ ದಾಖಲಿಸುವುದು 4. ಸಂಘದ ಹಿಂದಿನ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ಮಂಡನೆ ಹಾಗೂ ಅನುಮೋದನೆ.5. ದಿನಾಂಕ:01.04.2024 ರಿಂದ ದಿನಾಂಕ:31.03.2025ರ ವರೆಗಿನ ಲೆಕ್ಕ ಪತ್ರಗಳ ಮಂಡನೆ ಹಾಗೂ ಅಡಿಟ್ ವರದಿಯನ್ನು ಓದಿ ದಾಖಲಿಸಿ ಅನುಮೋದನೆ.6. ಸನ್ 2025-26ನೇ ಸಾಲಿನ ಅಂದಾಜು ಆಯ-ವ್ಯಯವನ್ನು ಅನುಮೋದಿಸುವುದು 7. ಸಂಘದ ನಿವೇಶನದ ದಾಖಲಾತಿಗಳನ್ನು ಸರಿಪಡಿಸುವುದು ಮತ್ತು ಈಗಿರುವ ಕಟ್ಟಡದ ನವೀಕರಣ ಹಾಗೂ ಹೊಸ ಸಮುದಾಯ ಭವನ ನಿರ್ಮಾಣಕ್ಕಾಗಿ ಪ್ರಸ್ತಾವಣೆ ಸಲ್ಲಿಸುವುದು 8. ಸಂಘದ ಪದಾಧಿಕಾರಿ/ನಿರ್ದೆಶಕರು ಬೇರೆ ತಾಲೂಕಿಗೆ ವರ್ಗಾವಣೆ ಆಗಿರುವ ಬಗ್ಗೆ 9. ಸದಸ್ಯರಿಂದ ಸ್ವೀಕೃತವಾಗಬಹುದಾದ ವಿಷಯ/ಸಲಹೆ/ಸೂಚನೆಗಳ ಬಗ್ಗೆ ಚರ್ಚೆ.10. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರಬಹುದಾದ ಇತರೆ ವಿಷಯಗಳು 11. ಅಧ್ಯಕ್ಷರ ಭಾಷಣ12. ವಂದನಾರ್ಪಣೆ. ವಿಳಾಸ: ಸರ್ಕಾರಿ ನೌಕರರ ಭವನ, ಬಸ್ ನಿಲ್ದಾಣ ಹತ್ತಿರ, ರಾಯಬಾಗ-591317, ಜೆ: ಬೆಳಗಾವಿ. ಸೂಚನೆ : ಸರ್ವಸದಸ್ಯರ ಸಭೆಗೆ ಇಟ್ಟಿರುವ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ಮಹಾಸಭೆಗೆ ಐದು ದಿನಗಳ ಮುಂಚಿತವಾಗಿ ಲಿಖಿತದ ಮೂಲಕ ಸಂಘದ ಕಾರ್ಯದರ್ಶಿಯವರಿಗೆ ತಿಳಿಸಿದ್ದಲ್ಲಿ, ಅಂತಹ ವಿಷಯಗಳ ಬಗ್ಗೆ ಅಧ್ಯಕ್ಷರ ಅನುಮತಿ ಪಡೆದು ಚರ್ಚಿಸಬಹುದಾಗಿದೆ.ನಂತರ ಬಂದ ವಿಷಯಗಳನ್ನು, ಚರ್ಚಿಸಲು ಅವಕಾಶವಿರುವುದಿಲ್ಲ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು