ವಿಷಯಕ್ಕೆ ಹೋಗಿ
ಬೆಳಗಾವಿ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕನ್ನಡಪರ ಸಂಘಟನೆಗಳ ಸಭೆ ನಡೆಸಿದ ಗಡಿ ಉಸ್ತುವಾರಿ ಸಚಿವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಮಾನ್ಯ ಕನಾ೯ಟಕ ಸರಕಾರ ಕಾನೂನು ಸಚಿವರೂ ಗಡಿ ಉಸ್ತುವಾರಿ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ತು, ಗಡಿನಾಡು ಕನ್ನಡ ಬಳಗ ನಿಯೋಗ ಭಾಗವಹಿಸಿ ಭೇಟಿಯಾಗಿ ಕಾರದಗಾ,ಮಾಣಕಾಪೂರ ಸಹಿತ ಹಲವು ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ, ಸುಸಜ್ಜಿತ ಕಟ್ಟಡ ನಿರ್ಮಾಣ, ಕನ್ನಡ ಪ್ರೌಢಶಾಲೆಗಳ ಅವಶ್ಯಕತೆ,ನಿಪ್ಪಾಣಿ ನಗರಸಭೆ ವತಿಯಿಂದ ಮಂಜೂರಾದ ಜಾಗ ಕನ್ನಡ ಭವನ ನಿರ್ಮಾಣ ಕುರಿತು ಮಾನ್ಯ ಸಚಿವರ ಗಮನ ಸೆಳೆದು ಮಾತನಾಡಿದ್ದರು. ನಿಪ್ಪಾಣಿ ಕನ್ನಡಪರ ಮುಖಂಡ ಪ್ರೋ ಮಿಥುನ ಅಂಕಲಿ.ಇದಕ್ಕೆ ಸೂಕ್ತವಾಗಿ ಸ್ಪಂದಿಸಿ ಶಿಘ್ರವೇ 21 ಜನರ ಗಡಿ ಕನ್ನಡ ಶಾಲೆಗಳ ಹಿತರಕ್ಷಣಾ ಸಮಿತಿ ಮಾಡಿ ಮಾನ್ಯ ಗಡಿ ಸಚಿವರೂ ಶಿಕ್ಷಣ ಸಚಿವರೊಂದಿಗೆ ಸಭೆ ನಡೆಸುವುದಾಗಿ ಹೇಳಿ ನಿಪ್ಪಾಣಿಗೆ ವಿಶೇಷ ಗಮನ ಹರಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಗಡಿ ಪ್ರಾಧಿಕಾರದ ಸದಸ್ಯ ಶ್ರೀ ಅಶೋಕ್ ಚಂದರಗಿ,ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಮ್ಮದ ರೋಷನ್,ಪೋಲೀಸ ವರಿಷ್ಠಾಧಿಕಾರಿಗಳು,ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಿಂದೆ ಸರ್ ,ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾನ್ಯ ಸವದತ್ತಿ ಶಾಸಕರೂ ,ನಿಪ್ಪಾಣಿ ಕನ್ನಡ ಮುಖಂಡರಾದ ಶ್ರೀ ಶಿವಾನಂದ ಪುರಾಣಿಕಮಠ, ಶ್ರೀ ಮಾರುತಿ ಕೊಣ್ಣುರಿ, ಶ್ರೀ ಬಾಹುಬಲಿ ನರವಡೆ,ಶ್ರೀ ಸಚಿನ ಕಾಂಬಳೆ, ಶ್ರೀ ವಿರಣ್ಣಾ ಗಿರಿಮಲ್ಲನವರ,ಕು ರೋಹಣ ಕಾಂಬಳೆ ಸಹಿತ ಜಿಲ್ಲೆಯ ಕನ್ನಡಪರ ಮುಖಂಡರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು