ವಿಷಯಕ್ಕೆ ಹೋಗಿ
ಶ್ರೀ ಗೋಮಟೇಶ್ ಶಿಕ್ಷಣ ಸಂಸ್ಥೆ,ಅಂಕಲಿ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಡಾಕ್ಟರ್ ಎನ್ ಎ ಮಗದುಮ್ ಇವರ 68,ನೇ ಹುಟ್ಟು ಹಬ್ಬ ಗೋಮಟೇಶ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಸಭಾಭವನದಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಿಕ್ಷಕರಿಂದ ಪ್ರಾರ್ಥನಾ ಗೀತೆ ಪ್ರಾರಂಭ ಮಾಡಲಾಯಿತು. ಶ್ರೀ ಎನ್. ಎಸ್. ನಿಡಗುಂಡೆ(ಡಾ.ಎನ್‌ಎಎಂ ಸಿ ಪಿ ಎಸ್ ಅಂಕಲಿ ಪ್ರಧಾನ ಶಿಕ್ಷಕರು ) ಸ್ವಾಗತ ಭಾಷಣ ಕೋರಿದರು.ಮುಖ್ಯ ಅತಿಥಿಗಳು-ಶ್ರೀ ಟಿ. ಈಶ್ವರ್ (ಸಂಸ್ಥಾಪಕ ಅಧ್ಯಕ್ಷರು ಚಂದನ ಎಜುಕೇಶನ್ ಸೊಸೈಟಿ ಲಕ್ಷ್ಮೇಶ್ವರ, ಜಿಲ್ಲೆ-ಗದಗ)ಇವರ ಅಮೃತ ಹಸ್ತದಿಂದ ದೀಪ ಬೆಳಗಿಸಲಾಯಿತು. ಅತಿಥಿಗಳು - ಶ್ರೀಮತಿ ಲಲಿತಾ. ಎನ್. ಮಗದುಮ್( ಖಜಾಂಜಿ , ಎಸಜಿಇ ಸೊಸೈಟಿ ಅಂಕಲಿ)ಶ್ರೀ ಸುರೇಶ ಚೌಗುಲೆ(ಕಾರ್ಯದರ್ಶಿ, ಎಸಜಿಇ ಸೊಸೈಟಿ ಅಂಕಲಿ)ಡಾ. ನೇಮಿನಾಥ್. ಎ. ಮಗದುಮ್ ಅವರು ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಹಿತನುಡಿಗಳನ್ನು ಹೇಳಿದರು. ಗೋಮಟೇಶ್ ಸಂಸ್ಥೆಯ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಹಿತಚಿಂತಕರು ಜನ್ಮದಿನದ ಅಭಿನಂದನೆಯನ್ನು ಸಲ್ಲಿಸಿದರು. ಸಹಾಯಕ ಶಿಕ್ಷಕರು ಶ್ರೀ ಎಸ್ಎನ್ ಮನೆ ಹಾಗೂ ಶ್ರೀ ಸಂಭಾಜಿ ಇಂಗಳೆ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಪತ್ರಕರ್ತರ ಮಿತ್ರರಿಗೆ ಹಾಗೂ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು