ವಿಷಯಕ್ಕೆ ಹೋಗಿ
ರಾಯಬಾಗ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಬೀರಪ್ಪನ ಮಡ್ಡಿಯಲ್ಲಿರುವ ಶಾಸಕರ ನಿವಾಸದಲ್ಲಿ ಕೃಷಿ ಹೊಂಡಗಳ ಸುತ್ತಲೂ ತಂತಿ ಬೇಲಿ ಅಳವಡಿಸಿ ಅಹಿತಕರ ಘಟನೆಯಾಗದಂತೆ ಎಚ್ಚರವಹಿಸಿ ಎಂಬ ಕರಪತ್ರಗಳನ್ನು ಮಾನ್ಯ ಶಾಸಕರು ಮಹೇಂದ್ರ ತಮ್ಮಣ್ಣವರ್ ಹಾಗೂ ರಾಯಬಾಗ್ ಕೃಷಿ ಇಲಾಖೆಯ ವತಿಯಿಂದ ಈ ಪ್ರಚಾರ ಜಾಹಿರಾತುಗಳನ್ನು ಶಾಸಕರ ಮುಖಾಂತರ ಬಿಡುಗಡೆಗೊಳಿಸಿದರು.ರೈತ ಬಾಂಧವರು ಕೃಷಿಹೊಂಡದ ಸುತ್ತಲೂ ತಂತಿ ಬೇಲಿ ಹಾಕುವುದರಿಂದ ಯಾವುದೇ ಜೀವ ಹಾನಿ ಪ್ರಾಣಿ ಹಾನಿ ಹಾಗೂ ಇತ್ಯಾದಿ ಪ್ರಾಣಿಗಳು ಪ್ರಾಣಪಾಯ ಆಗುವ ಮುಂಚೆ ಎಚ್ಚೆತ್ತುಕೊಂಡು ತಂತಿ ಬೆಲೆಯನ್ನು ಅಳವಡಿಸುವುದು ಬಹಳ ಸೂಕ್ತ ಎಂದು ವಿನೋದ್ ಮಾವರ್ಕರ್ ಕೃಷಿ ಇಲಾಖೆ ಅಧಿಕಾರಿ ರಾಯಬಾಗ್ ರೈತರಿಗೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡು ಮನವೊಲಿಸಿ ತಿಳಿಹೇಳಿದರು. ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ವರ್ಧಮಾನ ಶಿರಹಟ್ಟಿ, ರಾಜು ಕೌಜಲಗಿ, ಮಾಳು ಹಾಡಕಾರ,ಮುತಾಲಿಕ ಮುರುಗನ್ನವರ್, ಕಲ್ಮೇಶ್ ಕಾಂಬಳೆ, ಬಾಳೇಶ್ ಹಾಡಕಾರ, ಶಾಸಕರ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಕೃಷಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರದಿ : ರಮೇಶ ಕಾಂಬಳೆ, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು