ವಿಷಯಕ್ಕೆ ಹೋಗಿ
ರಾಯಬಾಗ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ಕುಡಚಿ ಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು,ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ದಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರಿನ ಒಳ ಹರಿವು ಹೆಚ್ವಳವಾಗಿದೆ.ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ರಾಜ್ಯಗಳನ್ನು ಸಂಧಿಸುವ ಮುಖ್ಯ ಸೇತುವೆ ಇದಾಗಿದೆ.ಕೊಂಡಿಯಂತೆ ಖ್ಯಾತಿ ಹೊಂದಿರುವ ಕುಡಚಿ ಮತ್ತು ಉಗಾರ ಮಧ್ಯದಲ್ಲಿ ಅಡ್ಡಲಾಗಿ ನಿರ್ಮಿಸಿದ ಕುಡಚಿ ಸೇತುವೆ ಮುಳುಗಡೆ,ಕೃಷ್ಣೆಯ ದಡದಲ್ಲಿರುವ ಕೆಲವು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕೃಷ್ಣೆಯ ಸೇತುವೆ ಮುಳುಗಡೆಯಾದರಿಂದ ಜನ - ಜಾನುವಾರು ಹೋಗದಂತೆ ಕುಡಚಿ ಪೋಲಿಸ್ ರಿಂದ ಬ್ಯಾರಿಗೇಟ ಅಳವಡಿಕೆ ಮಾಡಲಾಗಿದೆ,ಆಸ್ಪತ್ರೆಗಳ ನಗರ ಮಹಾರಾಷ್ಟ್ರದ ಮೀರಜ ,ಸಾಂಗ್ಲಿ ಆಸ್ಪತ್ರೆಗಳಿಗೆ ಹೋಗಲು ಹಾಗೂ ಇನ್ನಿತರ ಸರಕು ಸಾಗಾಟನೆಗೆ ಸಾರ್ವಜನಿಕರ ಪರದಾಟ ವಾಗಿದೆ,ಇನ್ನೂ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆಯ ಅಬ್ಬರದಾಟ. ವರದಿ ರಮೇಶ್ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು