ವಿಷಯಕ್ಕೆ ಹೋಗಿ
ಹುಕ್ಕೇರಿ : ಇಂಗಳಿ ಗ್ರಾಮದಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತ್ತು ಆಗಿರುವ ಹುಕ್ಕೇರಿ ಪಿ ಎಸ್ ಐ ನಿಖೀಲ ಕಾಂಬಳೆ ಅವರ ಅಮಾನತ್ತು ರದ್ದು ಮಾಡುವಂತೆ ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ವಿವಿಧ ದಲಿತ ಸಂಘಟನೆಳ ಕಾರ್ಯಕರ್ತರು ಹುಕ್ಕೇರಿ ಪಿ ಎಸ್ ಐ ಅವರನ್ನ ಈ ಪ್ರಕರಣದಲ್ಲಿ ಬಲಿ ಪಶು ಮಾಡಲಾಗಿದೆ. ಎರಡು ಪಕ್ಷದವರು ಎಫ್ ಐ ಆರ್ ಬೇಡ ಎಂದ ಕಾರಣ ಅವರು ಕಾನೂನು ರೀತಿಯಾಗಿ ಬರೆಯಿಸಿಕೊಂಡು ಕಳಿಸಿದ್ದಾರೆ. ಶ್ರೀ ರಾಮಸೇನೆ ಕಾರ್ಯಕರ್ತರ ಹಲ್ಲೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಆ ಘಟನೆಯಾಗಿದ್ದು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೀಗಾಗಿ ನಿಖೀಲ ಕಾಂಬಳೆ ಅವರನ್ನ ಅಮಾನತ್ತು ಮಾಡಿದ್ದರಲ್ಲಿ ಯಾವುದೇ ಹುರುಳಿಲ್ಲ. ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗುವ ವರೆಗೂ ನಿಖೀಲ ಕಾಂಬಳೆ ಅವರ ಅಮಾನತ್ತು ವಾಪಸ್ಸು ಪಡೆಯಬೇಕು. ಅವರನ್ನ ಪಿಎಸ್ಐ ಆಗಿ ಹುಕ್ಕೇರಿ ಠಾಣೆಯಲ್ಲೆ ಮುಂದುವರೆಸುವಂತೆ ಮುಖಂಡರು ಆಗ್ರಹಿಸಿದರು.ನಿಖೀಲ ಕಾಂಬಳೆ ಅವರ ಅಮಾನತ್ತು ವಾಪಸು ಪಡೆಯಲು ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನ ಭೇಟಿ ಮಾಡಿ ಅಮಾನತ್ತು ವಾಪಸ್ಸು ಪಡೆಯಲು ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ ಅವರಿಗೆ ಸೂಚನೆ ನೀಡುವಂತೆ ಒತ್ತಾಯಿಸಲಾಗುವದು. ಒಂದು ವೇಳೆ ಅಮಾನತ್ತು ವಾಪಸ್ಸು ಪಡೆಯದೇ ಇದ್ದಲ್ಲಿ ಬೆಳಗಾವಿ ಎಸ್ ಪಿ ಕಚೇರಿ ಎದುರು ಹಾಗೂ ಹುಕ್ಕೇರಿ ಪೊಲೀಸ್ ಠಾಣೆ ಮುಂದೆ ಬೆಳಗಾವಿ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ಒಗ್ಗಟ್ಟಾಗಿ ದಲಿತ ವಿರೋಧಿ ನೀತಿ ವಿರುದ್ಧ ಹೋರಾಟ ನೀಡುವ ಎಚ್ಚರಿಕೆಯನ್ನ ಮುಖಂಡರು ನೀಡಿದ್ದಾರೆ.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸದಾ ಕಾಂಬಳೆ, ಉದಯ ಹುಕ್ಕೇರಿ, ಬಸವರಾಜ ತಳವಾರ, ಡಾ.ರವಿ ಬಿ ಕಾಂಬಳೆ, ಮಹೇಶ ಹಟ್ಟಿಹೊಳಿ, ಶ್ರೀನಿವಾಸ ವ್ಯಾಪಾರಿ, ಅಪ್ಪಣ್ಣ ಖಾತೇದಾರ, ಮುತ್ತು ಕಾಂಬಳೆ, ಚಿದಾನಂದ, ಬಾಹುಸಾಬ್ ಪಾಂಡ್ರೆ, ಸದಾ ಕರೆಪ್ಪಗೋಳ,ವಿಠ್ಠಲ ಮಾದರ, ರೇಖಾ ಬಂಗಾರಿ, ಶಾಂತಾ ಯರಗಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು