ವಿಷಯಕ್ಕೆ ಹೋಗಿ
ರಾಯಬಾಗ : ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ರಾಯಬಾಗ ತಾಲೂಕಿನ ರಾಯಬಾಗ ಪಟ್ಟಣ ಪಂಚಾಯತಿಯ ಮುಂಭಾಗದಲ್ಲಿ ಹಾಗೂ ಪಟ್ಟಣ ಪಂಚಾಯಿತಿ ಮುಂದೆ ಇರುವ ತಾಲೂಕ ರಸ್ತೆಯ ಸಂಚಾರ ತಡೆಹಿಡಿದು ಪ್ರತಿಭಟನೆ ನಡೆಸಿದರು.ರಾಯಬಾಗ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪವನ ಲಭಾಗೆ ಅರೆ ಸರ್ಕಾರಿ ನೌಕರ, ಪಟ್ಟಣ ಪಂಚಾಯಿತಿಯಿಂದ ಸಾರ್ವಜನಿಕರಿಗೆ ಬೇಕಾಗಿರೋ ದಾಖಲೆಗಳನ್ನು ಕೊಡುವಲ್ಲಿ ಪವನ ಲಭಾಗೆ ಸಾರ್ವಜನಿಕರನ್ನು ಅಲ್ದಾಡಿಸುತ್ತಾ ಕೆಲಸ ಮಾಡದೆ ಮರಳಿ ಕಳಿಸುತ್ತಾನೆ . ಹಣ ಕೊಟ್ರೆ ಮಾತ್ರ ಬೇಗನೆ ಕೆಲಸ ಮಾಡಿ ಕೊಡುತ್ತಾನೆ, ಮುಖ್ಯ ಅಧಿಕಾರಿ ಮಾಡುವ ಕೆಲಸವನ್ನು ತಾನೇ ಮುಂದಾಳತ್ವ ವಹಿಸಿ ಫೋರ್ ಜರಿ ಸಹಿ ಮಾಡಿ ಹಣ ವಸಲಿ ಮಾಡುತ್ತಾನೆ ವರ್ಷಗಟ್ಟಲೆ ಬಾಕಿ ಇರುವ ಕರವನ್ನು ಕಮಿಷನ್ ಪಡೆದುಕೊಂಡು ಕರವನ್ನು ಕಡಿಮೆ ಮಾಡಿಸಿ ಕೊಡುತ್ತಾನೆ ಹೀಗೆ ಬಡ ಜನರಿಗೆ ಅನ್ಯಾಯ ಮಾಡುತ್ತಾ ಶ್ರೀಮಂತರ ಕೆಲಸ ಮಾಡಿ ಲಂಚ ಪಡೆದು ಸಾಕಷ್ಟು ಆಸ್ತಿ ಮಾಡಿದ್ದಾನೆ, ಇದರಿಂದಾಗಿ ಪವನ ಲಬಾಗೆ ಯನ್ನು ಕೆಲಸದಿಂದ ವಜಾ ಗೊಳಿಸಿ ಆತನ ಆಸ್ತಿಯನ್ನು ತನಿಖೆ ಮಾಡಿಸಿ ಸಂಬಂಧಿಸಿದ ಇಲಾಖೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡುವುದರ ಮುಖಾಂತರ ಆಗ್ರಹಪಡಿಸಿದರು. ಒಂದು ವೇಳೆ ಸಂಬಂಧ ಪಟ್ಟ ಇಲಾಖೆಯು ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕರವೇ ತಾಲೂಕ ಅಧ್ಯಕ್ಷರಾದ ರಾಕೇಶ್ ಅವಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಕರವೇ ಅಧ್ಯಕ್ಷರಾದ ರಾಕೇಶ ಅವಳೆ ಹಾಗೂ ಕಾರ್ಯಕರ್ತರೆಲ್ಲರೂ ಹಾಜರಿದ್ದರು.ವರದಿ :- ರಮೇಶ್ ಕಾಂಬಳೆ ರಾಯಭಾಗ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು