ವಿಷಯಕ್ಕೆ ಹೋಗಿ
ಬೆಳಗಾವಿ : ಬೆಳಗಾವಿಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಡಿದಿದ್ದ ಪತ್ರಕರ್ತರು, ನಿಷ್ಠಾವಂತ ಪತ್ರಕರ್ತರ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ನೀಡಿ ಸತ್ಕರಿಸಲಾಯಿತು. ಸಭೆಯ ಬಳಿಕ ಮಾತನಾಡಿದ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, “ಇತ್ತೀಚಿನ ದಿನಗಳಲ್ಲಿ ಧೈರ್ಯಶಾಲಿ ಮತ್ತು ನಿಷ್ಠಾವಂತ ಪತ್ರಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಅವರನ್ನು ದಬ್ಬಾಳಿಕೆ ಮಾಡುವ ಕ್ರೂರ ಪ್ರಯತ್ನ ನಡೆಯುತ್ತಿದೆ. ಇದು ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ನೀಡಲಾಗುತ್ತಿರುವ ನೇರ ಧಕ್ಕೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.“ಪತ್ರಕರ್ತರು ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಬರಬಾರದು. ಎಲ್ಲ ತಾಲೂಕುಗಳ ಪದಾಧಿಕಾರಿಗಳು ಸಂಘಟಿತವಾಗಿ ಒಟ್ಟಾಗಿ ಪ್ರತಿಭಟನೆಯಲ್ಲೂ ಭಾಗವಹಿಸಬೇಕು. ಸಂಘಟನೆಯ ಯಾವುದೇ ಸದಸ್ಯರ ಮೇಲೆ ದಬ್ಬಾಳಿಕೆ ಬಂದಾಗ ತಕ್ಷಣ ಸಂಬಂಧಿತ ತಾಲೂಕು ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು,” ಎಂದು ಅವರು ಕರೆ ನೀಡಿದರು.ಪತ್ರಕರ್ತರ ತಲೆಮೇಲೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಅಂತವರು ಖಂಡನೆ ವ್ಯಕ್ತಪಡಿಸಿ, “ಪತ್ರಕರ್ತರ ಹೆಸರಿನಲ್ಲಿ ಹಣದ ದಂಧೆಯಲ್ಲಿ ತೊಡಗಿರುವವರು ನಿಜವಾದ ಪತ್ರಕರ್ತರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇಂತಹವರ ವಿರುದ್ಧವೂ ನಾವು ಧ್ವನಿಯೆತ್ತಲೇ ಬೇಕು,” ಎಂದು ಸ್ಪಷ್ಟ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು. ನೂತನವಾಗಿ ಸೇರ್ಪಡೆಯಾದ ಪದಾಧಿಕಾರಿಗಳಾಗಿ:ಶ್ರೀಕಾಂತ ಚೌಗಲಾ – ಜಿಲ್ಲಾ ಗೌರವಾಧ್ಯಕ್ಷರುಗಂಗಾಧರ ಶಿರಗಾಂವಿ – ಜಿಲ್ಲಾ ಉಪಾಧ್ಯಕ್ಷರುಸಂತೋಷ ಪಾಟೀಲ – ಹುಕ್ಕೇರಿ ತಾಲೂಕು ಉಪಾಅಧ್ಯಕ್ಷರುಶಿವರಾಜ ಕೋಳಿ – ಅಥಣಿ ತಾಲೂಕು ಸಂಘಟನಾ ಸದಸ್ಯರುಮೋಹನ ಕಾಂಬಳೆ – ರಾಯಬಾಗ ತಾಲೂಕು ಸಂಘಟನಾ ಸದಸ್ಯರುಅಥಣಿ, ರಾಯಬಾಗ, ಗೋಕಾಕ್, ಚನ್ನಮ್ಮನ ಕಿತ್ತೂರು ಸೇರಿದಂತೆ ವಿವಿಧ ತಾಲೂಕುಗಳಿಂದ ಅಧ್ಯಕ್ಷರು, ಉಪಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.ಅಧಿಕಾರಿಗಳಿಗೆ ಮತ್ತು ಜನತೆಗೆ ಒಂದು ಸ್ಪಷ್ಟ ಸಂದೇಶಇಂದಿನ ಜಾಗತಿಕ ಪ್ರಪಂಚದಲ್ಲಿ ಮಾಧ್ಯಮವು ನಾಲ್ಕನೇ ಸ್ತoಭವಾಗಿ ಪರಿಗಣಿಸಲ್ಪಡುತ್ತಿದೆ. ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು, ನಿಷ್ಪಕ್ಷಪಾತವಾದ ಸತ್ಯವನ್ನು ಜನರ ಮುಂದಿಡುತ್ತಾರೆ. ಅವರ ಕರ್ತವ್ಯವನ್ನು ಅಡಚಣೆಗೊಳಿಸುವ, ಸುಳ್ಳು ಪ್ರಕರಣಗಳಲ್ಲಿ ಸಿಕ್ಕಿಹಾಕುವ, ಅಥವಾ ಅವರನ್ನು ಹಣದ ಬಲದಿಂದ ಮೌನಗೊಳಿಸುವ ಪ್ರಯತ್ನಗಳು ಪ್ರಜಾಪ್ರಭುತ್ವದ ನೆಲೆಯನ್ನು ನಡುಗಿಸುತ್ತವೆ.ಅದಕ್ಕಾಗಿ ಅಧಿಕಾರಿಗಳು ಮಾಧ್ಯಮದ ಮೇಲಿರುವ ಗೌರವವನ್ನು ಕಾಪಾಡಿ, ಸಹಕಾರ ನೀಡುವುದು ಅಗತ್ಯ. ಜೊತೆಗೆ ಸಾರ್ವಜನಿಕರೂ ಸಹ ಯಾರು ನಿಜವಾದ ಪತ್ರಕರ್ತರು, ಯಾರು ಬೋಗಸ್ – ಎಂಬುದನ್ನು ಗುರುತಿಸಿ, ಸುದ್ದಿಯ ಮೂಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹುಮುಖ್ಯ.ನೈತಿಕತೆ, ಧೈರ್ಯ ಮತ್ತು ಸಮಾಜಪರ ನಿಟ್ಟಿನಲ್ಲಿ ಕೆಲಸಮಾಡುವ ಪತ್ರಕರ್ತರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಮಾಧ್ಯಮವು ಸಮಾಜದ ಕಣ್ಣಾಗಿರುವುದರಿಂದ, ಆ ಕಣ್ಣನ್ನು ಕುಪ್ಪಳಿಸಬಾರದು – ಬದಲಿಗೆ ಅದರ ಮೂಲಕ ಸತ್ಯದ ಬೆಳಕು ಹರಡಬೇಕು.ವರದಿ: ಕೃಷ್ಣಾ ಕಡಲು ಕನ್ನಡ ಪತ್ರಿಕೆ, ಪತ್ರಕರ್ತರ ಪರವಾಗಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು